fbpx
ಸಮಾಚಾರ

ಬೆಂಗಳೂರು ಚಲನಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ BSY ಮುಂದೆ ಬೇಡಿಕೆ ಇಟ್ಟ ಯಶ್! ಏನದು?

ಹಲವು ದೇಶಗಳ ನೂರಾರು ಸಿನಿಮಾಗಳು ಪ್ರದರ್ಶನಗೊಳ್ಳುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರು ಚಿತ್ರೋತ್ಸವವನ್ನು ಉದ್ಘಾಟಿಸಿ ಶುಭಕೋರಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ‘ರಾಕಿಂಗ್ ಸ್ಟಾರ್‌’ ಯಶ್‌, ಹಿರಿಯ ನಟಿ ಜಯಪ್ರದಾ, ನಿರ್ಮಾಪಕ ಬೋನಿ ಕಪೂರ್‌ ಹಾಗೂ ಗಾಯಕ ಸೋನು ನಿಗಮ್ ಪಾಲ್ಗೊಂಡಿದ್ದರು. ನಟಿ ಅದಿತಿ ಪ್ರಭುದೇವ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಕೂಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಮುಂತಾದವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಕನ್ನಡ ನಾಡಲ್ಲಿ ಒಂದು ಸ್ಟುಡಿಯೋ ಕಟ್ಟಿಸಿ ಎಂದು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದರು. ನಮ್ಮ ಹುಡುಗರಿಗೆ ಶಕ್ತಿಯಿದೆ, ಸ್ವಲ್ಪ ಹುರಿದುಂಬಿಸಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

“ಕರ್ನಾಟಕದಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ, ನಮ್ಮ ಹುಡುಗರಿಗೆ ಶಕ್ತಿಯಿದೆ. ಮಾಡಬೇಕು ಎಂಬ ಛಲ ಇದೆ. ಅದಕ್ಕೆ ನೀವು ಸಹಕಾರ ನೀಡಬೇಕು. ಕಾಲಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೇ ಇದೆ. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಸ್ಟುಡಿಯೋಗಾಗಿ ಬೇರೆ ರಾಜ್ಯಗಳತ್ತ ಹೋಗಿ ಹೋಗಿ ಸಾಕಾಗಿದೆ. ಹಾಗಾಗಿ ನಮ್ಮಲ್ಲೇ ಒಂದು ಸ್ಟುಡಿಯೋ ಕಟ್ಟಿಸಿ ನಮ್ಮ ಹುಡುಗರಿಗೆ ಶಕ್ತಿ ಕೊಡಿ ಇಲ್ಲಿನ ಹುಡುಗರ ಜೊತೆ ಈ ಉದ್ಯಮವು ಬೆಳೆಯುತ್ತೆ” ಎಂದು ಮನವಿ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top