fbpx
ಸಮಾಚಾರ

ಕೆಜಿಎಫ್‌ ಶೂಟಿಂಗ್ ಮುಗಿಸಿ ಮುಂಬೈಗೆ ಹಾರಿದ ಬಾಲಿವುಡ್ ನಟಿ!

ಪ್ರಶಾಂತ್‌ ನೀಲ್ ನಿರ್ದೇಶನದ ‘ರಾಕಿಂಗ್‌ ಸ್ಟಾರ್‌’ ಯಶ್‌ ನಾಯಕನಾಗಿರುವ ‘ಕೆಜಿಎಫ್‌ ಚಾಪ್ಟರ್‌ 1’ ಕನ್ನಡ ಚಿತ್ರರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ನಾಂದಿ ಹಾಡಿದ ಚಿತ್ರ. ಈಗ ಕೆಜಿಎಫ್ 2 ಸಿನಿಮಾದ ಶೂಟಿಂಗ್​ ಇದೀಗ ಅಂತಿಮ ಹಂತಕ್ಕೆ ಬರುತ್ತಿದ್ದು, ಸದ್ಯದ ಸುದ್ದಿ ಏನಂದರೆ, ರವೀನಾ ಟಂಡನ್ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಾಸ್ ಆಗಿದ್ದಾರೆ.

 

 

ಸದ್ಯ ಹೈದರಾಬಾದ್‍ನಲ್ಲಿ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ನಡುವೆ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರವೀನಾ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಸ್ ತೆರೆಳಿದ್ದಾರೆ.

ರವೀನಾ ಟಂಡನ್ ಅದ್ಧೂರಿಯಾಗಿ ಸ್ವಾಗತ ಮಾಡಿದ್ದ ಚಿತ್ರತಂಡ ಈಗ ಅದ್ಧೂರಿಯಾಗಿಯೆ ಬೀಳ್ಕೊಟ್ಟಿದ್ದಾರೆ. ಇಡೀ ಕೆಜಿಎಫ್-2 ತಂಡ ರವೀನಾ ಅವರ ಜೊತೆ ನಿಂತು ಫೋಟೋಗೆ ಪೋಸ್ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಜಿಎಫ್‌ ಟೀಮ್‌ ಜೊತೆಗಿರೋ ವಿಡಿಯೋ ಪೋಸ್ಟ್‌ ಮಾಡಿರೋ ರವಿನಾ ತಂಡನ್, And it’s a wrap ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top