fbpx
ಸಮಾಚಾರ

ಲೆಜೆಂಡರಿ ನಿರ್ದೇಶಕನ ವಿಚ್ಛೇದಿತ ಮಗನ ಜೊತೆ ನಟಿ ಅನುಷ್ಕಾ ಮದುವೆ!

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಮದುವೆ ವಿಚಾರಗಳ ಮೂಲಕವೇ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ಅನುಷ್ಕಾ ಶೆಟ್ಟಿಯನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಅನುಷ್ಕಾ ಶೆಟ್ಟಿ ಮದುವೆಯ ಬಗ್ಗೆ ಒಂದು ಸುರ್ಪ್ರೈಸ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

 

 

ಕನ್ನಡದ ಹುಡುಗಿ ಅನುಷ್ಕಾ ಬಾಲಿವುಡ್ ಮಟ್ಟದಲ್ಲಿಯೂ ಮಿಂಚುತ್ತಿರೋ ತಾರೆ. ಇಂತ ಅನುಷ್ಕಾ ಮತ್ತು ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಇಬ್ಬರೂ ಲವ್ವಲ್ಲಿ ಬಿದ್ದಿದ್ದು, ಮದುವೆ ಕೂಡ ಮಾಡಿಕೊಳ್ಳಲಿದ್ದಾರೆ ಎನ್ನುವ ಅಫೇರ್ ಬಗ್ಗೆ ರಂಗು ರಂಗಾದ ಕಥೆಗಳು ಒಂದಷ್ಟು ವರ್ಷಗಳ ಹಿಂದೆಯಿಂದಲೇ ಬಾರಿ ಕೇಳಿ ಬಂದಿತ್ತು. ಆದರೆ ಆ ಬಗ್ಗೆ ಎಷ್ಟೇ ಬಾರಿ ಕೇಳಿದರೂ ಇಬ್ಬರಿಂದಲೂ ನಕಾರಾತ್ಮಕ ಉತ್ತರವೇ ಬರುತ್ತಿತ್ತು. ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ಸದ್ಯ ಈ ಇಬ್ಬರು ತಾರೆಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚೆಗೆ ಕ್ರಿಕೆಟ್ ಆಟಗಾರನ ಜೊತೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬಗ್ಗೆ ಸ್ವತಃ ಅನುಷ್ಕಾ ಸ್ಪಷ್ಟನೆ ನೀಡಿದ್ದರು. ಇದೀಗ ಲೆಜೆಂಡರಿ ನಿರ್ದೇಶಕರ ಮಗನ ಜೊತೆ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಹೌದು. ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರ ಪುತ್ರ ಪ್ರಕಾಶ್ ಕೋವೆಲಮುಡಿ ಜೊತೆ ಅನುಷ್ಕಾ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಮತ್ತು ಪ್ರಕಾಶ್ ಇಬ್ಬರು ಕೂಡ ಅನೇಕ ವರ್ಷಗಳಿಂದ ಪರಿಚಯವಿದ್ದು, ಪರಸ್ಪರ ಪ್ರೀತಿಸುತ್ತಿದ್ದರಂತೆ. ಆದರೆ ಪ್ರಕಾಶ್‍ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ.

ಪ್ರಕಾಶ್ 2014ರಲ್ಲಿ ಕನ್ನಿಕಾ ಧಿಲ್ಲಾನ್ ಅವರನ್ನು ವಿವಾಹವಾಗಿದ್ದರು. ನಂತರ 2017ರಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದರು. ಇದೀಗ ಅನುಷ್ಕಾ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಸದ್ಯ ಅನುಷ್ಕಾ ಮತ್ತು ಪ್ರಕಾಶ್ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಬಗ್ಗೆ ಅನುಷ್ಕಾ ಆಗಲಿ ಅಥವಾ ಪ್ರಕಾಶ್ ಕುಟುಂಬವಾಗಲಿ ಯಾವುದು ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಸುದ್ದಿ ನಿಜವೇ..? ಅಥವಾ ಗಾಳಿ ಸುದ್ದಿಯೇ? ಎಂಬುದು ಅನುಷ್ಕಾ ಶೆಟ್ಟಿ ಮದುವೆ ದಿನವೇ ಗೊತ್ತಾಗಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top