fbpx
ಸಮಾಚಾರ

ತನ್ನ ಫೋಟೋಗಳನ್ನು ಎಡಿಟ್ ಮಾಡಿದ ಭಾರತೀಯ ಟ್ರೋಲಿಗರಿಗೆ ಇವಾಂಕ ಟ್ರಂಪ್ ಹೇಳಿದ್ದೇನು ಗೊತ್ತಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರೋವಾಗ ತಮ್ಮ ಮಗಳನ್ನ ಕರೆದುಕೊಂಡು ಬಂದು ವಾಪಸ್ ಹೋಗಿದ್ದಾರೆ. ಆದರೆ ತಂದೆಗಿಂತ ಮಗಳು ಇವಾಂಕ ಟ್ರಂಪ್, ಭಾರತದಲ್ಲಿ ಫುಲ್ ಹವಾ ಮಾಡುತ್ತಿದ್ದಾಳೆ. ತಾಜ್ ಮಹಾಲ್ ಮುಂದೆ ಇವಾಂಕ ಫೋಸ್ ಕೊಟ್ಟಿರುವ ಫೋಟೋಗಳು ಫುಲ್ ವೈರಲ್ ಆಗುತ್ತಿದ್ದು, ಮನಸ್ಸಿಗೆ ಬಂದಂತೆ ಟ್ರಾಲ್ ಮಾಡಲಾರಂಭಿಸಿದ್ದಾರೆ. ಆದ್ರೆ, ಇದಕ್ಕೆ ಇವಾಂಕಾ ಫುಲ್ ಫಿದಾ ಆಗಿದ್ದಾರೆ.

ಇವಾಂಕಾ ಫೋಟೋಗಳು ತುಂಬ ವೈರಲ್​ ಆಗುತ್ತಿವೆ. ಅದೂ ಕೂಡ ವಿವಿಧ ರೀತಿಯ ಟ್ರೋಲ್​ ಮಾಡಿ, ಫೋಟೋಶಾಪ್​​ ಮೂಲಕ ವಿಭಿನ್ನವಾಗಿ ಎಡಿಟ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಟ್ವಿಟರ್​ನಲ್ಲಿ ಶೇರ್​ ಆದ ಫನ್ನಿ ಫೋಟೋಗಳಿಗೆ ಇವಾಂಕಾ ಟ್ರಂಪ್​ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು ತುಂಬ ವಿಶೇಷ. ಅದರಲ್ಲೂ ಭಾರತೀಯರಿಗೆ ಧನ್ಯವಾದ ತಿಳಿಸಿದ ಅವರ ದೊಡ್ಡಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

 

 

ಖ್ಯಾತ ಗಾಯಕ, ನಟ ದಿಲ್ಜಿತ್ ದೋಸಂಜ್ ಅವರು ಇವಾಂಕಾ ಫೋಟೋಗೆ ತಮ್ಮ ಫೋಟೋ ಎಡಿಟ್ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದರು. ತಾಜ್ ಮಹಲ್‍ಗೆ ಕರೆದುಕೊಂಡು ಹೋಗು ಎಂದು ಹಠ ಮಾಡುತ್ತಿದ್ದಳು, ಅದಕ್ಕೆ ಕರೆತಂದೆ ಎಂದು ಬರೆದು ಇವಾಂಕಾ ಹಾಗೂ ತಾವು ತಾಜ್ ಮಹಲ್ ಮುಂದೆ ಕೂತಿರುವ ಎಡಿಟೆಡ್ ಫೋಟೋವನ್ನು ದಿಲ್ಜಿತ್ ಟ್ವೀಟ್ ಮಾಡಿದ್ದರು. ಅಲ್ಲದೇ ಇವಾಂಕಾರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇವಾಂಕಾ ಅವರು, ‘ನನ್ನನ್ನು ತಾಜ್ ಮಹಲ್‍ಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು, ಅದೊಂದು ಮರೆಯಲಾಗದ ಅನುಭವ’ ಎಂದು ಖುಷಿಯಿಂದ ರೀ-ಟ್ವೀಟ್ ಮಾಡಿದ್ದಾರೆ.

 

 

ಇನ್ನು, ದಿಲ್ಜಿತ್ ದೊಸಾಂಜ್ ಪೋಸ್ಟ್​ಗೆ ಮಾತ್ರವಲ್ಲದೇ ಇನ್ನೊಂದು ಎಡಿಟಿಂಗ್ ಫೋಟೋಗೂ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟಿಗರೊಬ್ಬರು, ಇವಾಂಕ ಕುಳಿತಿದ್ದ ಫೋಟೋವನ್ನು ಡಿಫರೆಂಟ್​ ಪೋಸ್​ನಲ್ಲಿ ಬೇರೆ ಬೇರೆಯವರೊಂದಿಗೆ ಇರುವಂತೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದರು. ಇದಕ್ಕೂ ಕೂಡ ಇವಾಂಕ ಟ್ರಂಪ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಜನರು ತೋರಿಸಿದ ಪ್ರೀತಿಯನ್ನ ಮೆಚ್ಚಿಕೊಳ್ತೀನಿ. ನನಗೆ ಹಲವು ಹೊಸ ಫ್ರೆಂಡ್ಸ್​ ಸಿಕ್ಕಿದ್ದಾರೆ ಅಂತ ಟ್ವಿಟರ್​ ಮೂಲಕ ಕಾಲೆಳೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top