fbpx
ಸಮಾಚಾರ

ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಐಎಎಸ್ ಅಧಿಕಾರಿ!

ಉನ್ನತ ಹುದ್ದೆಯಲ್ಲಿರುವವ ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡೋದು ಇಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ರೂ ಸರ್ಕಾರಿ ಆಸ್ಪತ್ರೆ ಮಾತ್ರ ಬೇಡವಾಗಿರುತ್ತೆ. ಆದರೆ ಇಲ್ಲೋರ್ವ ಜಿಲ್ಲಾಧಿಕಾರಿ ಇದಕ್ಕೆ ತದ್ವಿರುದ್ಧವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಜಾರ್ಖಂಡ್ ಗೊಡ್ಡಾ ಪ್ರದೇಶದ ಮಹಿಳಾ ಐಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಇಲ್ಲಿನ ಸರ್ದಾರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ, ನೀಡಿದ್ದಾರೆ.

 

 

ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯ ಜನರೂ ಸಹ ಹೋಗಲು ಯೋಚನೆ ಮಾಡುತ್ತಾರೆ. ಅಂತಹವರಿಗೆ ಐಎಎಸ್ ಅಧಿಕಾರಿ ಕಿರಣ್ ಅವರು ಉತ್ತಮ ಉದಾಹರಣೆ ಆಗಿದ್ದಾರೆ. ಇದೀಗ ಕರಣ್ ಅವರ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಣ್ ಕುಮಾರ್ ಪಾಸಿ ಮುಂದಿನ ಎರಡು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರುತ್ತಾರೆ. ಅವರ ಯಶಸ್ವಿ ಹೆರಿಗೆಯ ನಂತರ ಅನೇಕ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ಬಂದು ಅವರನ್ನು ಅಭಿನಂದಿಸಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರು ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಐಎಎಸ್ ಅಧಿಕಾರಿ ಮಾಡಿರುವ ಕೆಲಸದಿಂದ ಖಂಡಿತವಾಗಿಯೂ ಸರ್ಕಾರಿ ವ್ಯವಸ್ಥೆಯಲ್ಲಿ ವಿಶ್ವಾಸ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಸಿವಿಲ್ ಸರ್ಜನ್ ಎಸ್‍.ಪಿ ಮಿಶ್ರಾ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top