fbpx
ಸಮಾಚಾರ

ಸದ್ಯದಲ್ಲೇ ಹೆಚ್ಚಾಗಲಿದೆ ಇಂದಿರಾ ಕ್ಯಾಂಟೀನ್ ಊಟ, ತಿಂಡಿ ಬೆಲೆ!

ಸಿಲಿಕಾನ್ ಸಿಟಿ ಜನರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಊಟ ಮತ್ತು ಉಪಹಾರ ಇನ್ನು ಮುಂದೆ ಸಾರ್ವಜನಿಕರ ಜೇಬಿಗೂ ಕತ್ತರಿ ಹಾಕಲಿದೆ. ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಉಪಹಾರ ಮತ್ತು ಊಟ ಬೆಲೆಯಲ್ಲಿ ಏರಿಕೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.

ಇಂದಿರಾ ಕ್ಯಾಂಟೀನ್​ನಲ್ಲಿ ಹಾಲಿ 10 ರೂಪಾಯಿಗೆ ಊಟ ಹಾಗೂ 5 ರೂಪಾಯಿಗೆ ತಿಂಡಿ ಸಿಗುತ್ತಿದೆ. ಶೀಘ್ರವೇ ದರ ಪರಿಷ್ಕರಣೆ ನಡೆಯಲಿದೆ. ಹೊಸ ದರ ಜಾರಿಗೆ ಬಂದರೆ ಊಟದ ಬೆಲೆ 15 ರೂಪಾಯಿ ಹಾಗೂ ತಿಂಡಿ ಬೆಲೆ 10 ರೂಪಾಯಿ ಆಗಲಿದೆ. ಹೊರೆ ತಪ್ಪಿಸಲು ಈ ಕ್ರಮ ಅನಿವಾರ್ಯ ಎನ್ನುವುದು ಬಿಬಿಎಂಪಿ ಮೂಲಗಳ ಮಾಹಿತಿ.

ಹೊಸ ಗುತ್ತಿಗೆ ಜೊತೆಗೆ ನೂತನ ದರಗಳನ್ನು ಜಾರಿಗೊಳಿಸಲು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಉನ್ನತ ಮೂಲಗಳು ಹೇಳಿವೆ. ಇಂದಿರಾ ಕ್ಯಾಂಟೀನ್ ಗೆ ಸರ್ಕಾರ ಅನುದಾನ ನೀಡದ ಕಾರಣ ಸರ್ಕಾರದ ಹೊರೆ ಇಳಿಸಲು ಮುಂದಾಗಿರುವ ಬಿಬಿಎಂಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸುವ ಸಲುವಾಗಿ ರಾಜ್ಯಸರಕಾರದ ಕಡೆಯಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top