fbpx
ಸಮಾಚಾರ

ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಠಿಸಿದ ರಾಬರ್ಟ್ ಚಿತ್ರದ ಮಾಸ್ ಹಾಡು!

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ರಾಬರ್ಟ್ ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಈ ಹಾಡಿಗೆ Dಮಯ ಸಾಹಿತ್ಯ ಒದಗಿಸಿರುವುದು ಕವಿರತ್ನ ನಾಗೇಂದ್ರ ಪ್ರಸಾದ್. ಹಾಡಿನ ಸಾಹಿತ್ಯ ಮಾಸ್ ಹೀರೋ ದರ್ಶನ್ ಅವರಿಗಾಗಿ ರಚಿತವಾಗಿವೆ. ಹಡಗು ಹಿಡಿದು ಪಡೆಯೇ ಬರಲಿ, ಹೊಸಕಿ ಬಿಡುವೆ ಕಾಲಡಿ, ಡಿ.. ಡಿ… ಬಾ ನಾ ರೆಡಿ ಸಾಲುಗಳಿಂದ ಹಾಡು ಆರಂಭಗೊಳ್ಳುತ್ತದೆ.

ವ್ಯಾಸರಾಜ್, ಸಂತೋಷ್ ವೆಂಕಿ, ಅನಿರುದ್ಧ ಶಾಸ್ತ್ರಿ, ಸುಪ್ರೀತ್ ಫಲ್ಗುನಾ, ನಿಖಿಲ್ ಪಾರ್ಥಸಾರಥಿ, ಮಾಧವೇಶ್ ಭಾರದ್ವಾಜ್ ಧ್ವನಿ ನೀಡಿದ್ದಾರೆ. 6 ಗಾಯಕರ ಕಂಠಸಿರಿಯಿಂದ ಮೂಡಿಬಂದಿರುವ ಸಾಂಗ್ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ. ಬಹಳ ದಿನಗಳ ನಂತರ ದರ್ಶನ್ ಅಭಿಮಾನಿಗಳೀಗೆ ಚಿತ್ರ ದರ್ಶನವಾಗುತ್ತಿದೆ. ಲಿರಿಕಲ್ ಸಾಂಗ್ ಯೂಟ್ಯೂಬ್ ಮಾತ್ರವಲ್ಲದೇ ಟಿಕ್ ಟಾಕ್ ನಲ್ಲಿಯೂ ಸದ್ದು ಮಾಡುತ್ತಿದೆ. ಹಾಡನ್ನು ಇಷ್ಟಪಟ್ಟಿರುವ ಅಭಿಮಾನಿಗಳು ಅರ್ಜುನ್ ಜನ್ಯ ಸಂಗೀತ ಮತ್ತು ನಾಗೇಂದ್ರ ಪ್ರಸಾದ್‌ ಸಾಹಿತ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ರಾಬರ್ಟ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ಚಂದನವನದ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಶೇ.90 ಶೂಟಿಂಗ್ ಮುಗಿಸಿರುವ ಚಿತ್ರತಂಡ ಏಪ್ರಿಲ್​ 9 ರಂದು ತೆರೆಗೆ ಬರಲು ಯೋಜನೆ ರೂಪಿಸಿದ್ದು, ಅದರೊಳಗೆ ಒಂದು ಹಾಡಿನ ಚಿತ್ರೀಕರಣ ಮುಗಿಸಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top