fbpx
ಸಮಾಚಾರ

ಬಿಗ್ ಬಾಸ್ ವಿನ್ನರ್ ಮೇಲೆ ಪಬ್‌ನಲ್ಲಿ ಶಾಸಕನ ಸಹೋದರ, ಸಹಚರರಿಂದ ಮಾರಣಾಂತಿಕ ಹಲ್ಲೆ!

ಪಬ್​ವೊಂದರಲ್ಲಿ ಬಿಗ್​ ಬಾಸ್​​ ಸ್ಪರ್ಧಿಯೊಬ್ಬರ ಮೇಲೆ ದಾಳಿ ನಡೆದಿರುವ ಘಟನೆ ಕಳೆದ ಗುರುವಾರದಂದು ನಡೆದಿದೆ. ಇದೀಗ ಹಲ್ಲೆ ನಡೆದಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ವೈರಲ್​ ಆಗಿದೆ.. ಹೌದು ತೆಲುಗು ಬಿಗ್ ಬಾಸ್ ಸೀಜನ್ 3ರ ವಿಜೇತರಾಗಿದ್ದ, ಗಾಯಕ ರಾಹುಲ್ ಸಿಪ್ಲಿಗುಂಜ್ ಮೇಲೆ ಈ ದಾಳಿ ನಡೆದಿದೆ. ಈ ದಾಳಿ ನಡೆದಿದ್ದೇಕೆ ಅಂತೀರಾ? ಮುಂದೆ ಓದಿ!

 

 

ತೆಲುಗು ಗಾಯಕ ಮತ್ತು ಬಿಗ್ ಬಾಸ್ ತೆಲುಗು ಸೀಸನ್ 3 ವಿಜೇತ ರಾಹುಲ್ ಸಿಪ್ಲಿಗುಂಜ್ ಅವರ ಮೇಲೆ ಟಿಆರ್‌ಎಸ್‌ ಶಾಸಕ ರೋಹಿತ್ ರೆಡ್ಡಿ ಅವರ ಸಹೋದರ ಮತ್ತು ಅವರ ಸಹಚರರು ಹಲ್ಲೆ ನಡೆಸಿದ್ದಾರೆ. ಬುಧವಾರ ರಾತ್ರಿ ಹೈದರಾಬಾದ್‌ನ ಗಚಿಬೌಲಿಯ ಪಬ್‌ನಲ್ಲಿ ಈ ಘಟನೆ ನಡೆದಿದೆ.

35 ವರ್ಷದ ರಾಹುಲ್ ಸಿಪ್ಲಿಗುಂಜ್ ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಆತನ ನಾಲ್ವರು ಸ್ನೇಹಿತರು ರಾತ್ರಿ 8.30 ರ ಸುಮಾರಿಗೆ ಹೈದರಾಬಾದ್‌ನ ಗಚಿಬೌಲಿಯ ಪ್ರಿಸ್ಮ್ ಪಬ್‌ಗೆ ತೆರಳಿದ್ದರು. ಇನ್ನೊಂದೆಡೆ, ಅದೇ ಪಬ್‌ನಲ್ಲಿ ರೋಹಿತ್ ರೆಡ್ಡಿ ಅವರ ಸಹೋದರ ರಿತೇಶ್ ರೆಡ್ಡಿ ಸೇರಿದಂತೆ 5 – 6 ಜನರನ್ನು ಒಳಗೊಂಡ ಇತರ ಗುಂಪು ಪಬ್‌ನಲ್ಲಿದ್ದರು ಎಂದು ಹೈದರಾಬಾದ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

 

 

ಪಬ್‍ನಲ್ಲಿ ಕೆಲವರು ರಾಹುಲ್ ಅವರ ಗೆಳತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವಿಚಾರಕ್ಕೆ ಗಲಾಟೆ ನಡೆದು ಹಲ್ಲೆ ಮಾಡಲಾಗಿದೆ. ಈ ಘಟನೆಯಲ್ಲಿ ರಾಹುಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಬ್‌-ಇನ್ಸ್‌ಪೆಕ್ಟರ್ ವೈ ಸುರೇಂದರ್ ರೆಡ್ಡಿ ತಿಳಿಸಿದ್ದಾರೆ.

 
ರಾಹುಲ್ ಶಾಸಕನ ಸಹೋದರರ ಗುಂಪಿನ ಬಳಿ ಹೋಗಿ ತನ್ನ ಮಹಿಳಾ ಸ್ನೇಹಿತರ ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆ ವೇಳೆ ಶಾಸಕನ ಸಹೋದರ ರೆಡ್ಡಿ ಹಾಗೂ ಆತನ ಸ್ನೇಹಿತರು ರಾಹುಲ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅವರಲ್ಲಿ ಒಬ್ಬರು ರಾಹುಲ್‌ ಮುಖ, ತಲೆಗೆ ಬಿಯರ್‌ ಬಾಟಲಿಯಿಂದ ಹೊಡೆದಿದ್ದಾರೆ ಎಂದೂ ಇನ್ಸ್‌ಪೆಕ್ಟರ್‌ ಹೇಳಿದ್ದಾರೆ.
 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top