fbpx
ಸಮಾಚಾರ

ನಟ ಯಶ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಸಹ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಫಿಲಂ ಸ್ಟುಡಿಯೋ ಬಗ್ಗೆ ಮನವಿ ಮಾಡಿದ್ದರು. ಸಿನಿಮೋತ್ಸವದಲ್ಲಿ ಮಾತನಾಡಿದ ಯಶ್, ”ಮುಖ್ಯಮಂತ್ರಿಗಳೇ…ನಮಗೊಂದು ಅತ್ಯುತ್ತಮ ಫಿಲಂ ಸ್ಟುಡಿಯೋ ನಿರ್ಮಿಸಿ ಕೊಡಿ..ಇಡೀ ಜಗತ್ತು ತಿರುಗಿ ನೋಡುವಂತೆ ಮಾಡುತ್ತೇವೆ. ನಮ್ಮ ಹುಡುಗರಿಗೆ ಶಕ್ತಿಯಿದೆ. ಸ್ವಲ್ಪ ಹುರಿದುಂಬಿಸಬೇಕು” ಎಂದು ಹೇಳಿದ್ದರು

ಇದೀಗ ಬಿಎಸ್ ಯಡಿಯೂರಪ್ಪನವರು 2020ರ ರಾಜ್ಯ ಬಜೆಟ್ ಮಂಡಿಸಿದ್ದು ಬರೋಬ್ಬರಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಬೆಂಗಳೂರಿನಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.

ಕರ್ನಾಟಕದಲ್ಲೇ ಒಂದು ಸ್ಟುಡಿಯೋ ಮಾಡಿಕೊಡಿ, ನಮ್ಮ ಹುಡುಗರಿಗೆ ಶಕ್ತಿ ಇದೆ. ಮಾಡಬೇಕು ಎಂಬ ಛಲವಿದೆ. ಅದಕ್ಕೆ ನೀವು ಸಹಕಾರ ನೀಡಬೇಕು. ಕಾಲಕಾಲದಿಂದ ಈ ಸ್ಟುಡಿಯೋ ವಿಚಾರ ಮುಂದೆ ಹೋಗುತ್ತಲೆ ಇದೆ. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಸ್ಟುಡಿಯೋಗಾಗಿ ಬೇರೆ ರಾಜ್ಯಗಳತ್ತ ಹೋಗಿ ಹೋಗಿ ಸಾಕಾಗಿದೆ. ಹಾಗಾಗಿ ನಮ್ಮಲ್ಲೇ ಒಂದು ಸ್ಟುಡಿಯೋ ಕಟ್ಟಿಸಿ ನಮ್ಮ ಉದ್ಯಮವು ಬೆಳೆಯುತ್ತೆ ಎಂದು ಯಶ್ ಮನವಿ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top