fbpx
ಸಮಾಚಾರ

ಕೊನೆಗೂ ಪೊಗರು ಚಿತ್ರಕ್ಕೆ ಬಿಡುಗಡೆಯ ಭಾಗ್ಯ: ರಿಲೀಸ್ ಡೇಟ್ ಫಿಕ್ಸ್

ಧ್ರುವ ಸರ್ಜಾ ಅವರು ಪೊಗರು ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಎಲ್ಲಾರಿಗೂ ಗೊತ್ತಿದೆ. ಕಳೆದ ಅಕ್ಟೋಬರ್​ ನಲ್ಲಿ ಪೊಗರು ಚಿತ್ರದ ಡೈಲಾಗ್​ ಟ್ರೈಲರ್​ ಬಿಡುಗಡೆ ಮಾಡಿದ್ದರು. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ. ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರಲಿದೆ.

ಎಲ್ಲ ಅಂದುಕೊಂಡಂತೆ ನಡೆದರೆ, ಡಾ. ರಾಜ್‌ಕುಮಾರ್ ಜನ್ಮದಿನದಂದು (ಏ.24) ಈ ಸಿನಿಮಾ ತೆರೆಕಾಣಲಿದೆಯಂತೆ. ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪ್ರಕ್ರಿಯೆ ಇನ್ನೂ ಆಗಿಲ್ಲ. ಹಾಗಾಗಿ, ಅಧಿಕೃತ ಘೋಷಣೆ ಆಗಿಲ್ಲ. ಚಿತ್ರತಂಡ ಸಿನಿಮಾವನ್ನು ಏಪ್ರಿಲ್ 24ರಂದೇ ತೆರೆಕಾಣಿಸಿಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿರುವ ಪೊಗರು ಸಿನಿಮಾ, ರಿಲೀಸ್ ಗೂ ತಯಾರಿ ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಸಿನಿಮಾ ಸೆನ್ಸಾರ್ ಆದಮೇಲೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದೆಯಂತೆ ಚಿತ್ರತಂಡ. ಸಧ್ಯದಲ್ಲೇ ಚಿತ್ರೀಕರಣ ಮುಗಿಸಿ ಪೊಗರು ಸೆನ್ಸಾರ್ ಪರೀಕ್ಷೆಗೆ ಹೋಗಲಿದೆ.

ಅಂದಹಾಗೆ ‘ಪೊಗರು’ ಚಿತ್ರಕ್ಕೆ ಬಿ.ಕೆ.ಗಂಗಾಧರ್ ಎಂಬುವವರು ಬಂಡವಾಳ ಹೂಡಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿದ್ಯಾ.S ಅವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಉಳಿದಂತೆ ದ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top