fbpx
ಸಮಾಚಾರ

ತೆಲುಗು ಶೋನಲ್ಲಿ ಕಿಚ್ಚ ಸುದೀಪ್ ರನ್ನು ಹೊಗಳಿ “ಜೈ ಕರ್ನಾಟಕ, ಜೈ ತಾಯಿ ಭುವನೇಶ್ವರಿ” ಎಂದ ರವಿಶಂಕರ್

ತಮ್ಮ ನಟನಾ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕೊಟ್ಟ ಕಿಚ್ಚ ಸುದೀಪ್​​​ ಮತ್ತು ಗೆಲ್ಲಿಸಿದ್ದ ಕನ್ನಡ ಪ್ರೇಕ್ಷಕರ ಬಗ್ಗೆ ನಟ ರವಿಶಂಕರ್ ಹಲವು ವೇದಿಕೆಗಳಲ್ಲಿ ಹೃದಯತುಂಬಿ ಮಾತನಾಡಿದ್ದಾರೆ. ಇದೀಗ ತೆಲುಗು ಕಿರುತೆರೆ ವಾಹಿನಿ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕನ್ನಡಪ್ರೇಮ ಮೆರೆದಿದ್ದಾರೆ.

ಇತ್ತೀಚೆಗೆ ತೆಲುಗಿನ ಟಿವಿ ಚಾನೆಲ್​ನಲ್ಲಿ ಪ್ರಸಾರವಾಗುವ ಅಲಿತೊ ಸರದಾಗ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರೋದ್ಯಮ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ನೆನಪಿಸಿಕೊಂಡರು. ಕಿಚ್ಚ ಸುದೀಪ್ ಅವರ ಕಡೆಯಿಂದ ಫೋನ್ ಬಂತು, ಬೆಂಗಳೂರಿಗೆ ಬರುವಂತೆ ಸೂಚಿಸಿದರು. ನನಗೆ ಫುಲ್ ಕನ್ಫ್ಯೂಸ್, ನನ್ನ ಅಣ್ಣ ಸಾಯಿಕುಮಾರ್ ಎಂದು ಕೊಂಡು ನನಗೆ ಫೋನ್ ಮಾಡಿದ್ರಾ ಎಂದು ಅವರಲ್ಲಿ ಕೇಳಿದೆ. ಕೆಂಪೇಗೌಡ ಎನ್ನುವ ಸಿನಿಮಾದಲ್ಲಿ ನೀವು ನಟಿಸಬೇಕು ಎಂದು ನನ್ನಲ್ಲಿ ಕೇಳಿದರು.

ತಮಿಳಿನಲ್ಲಿ ಪ್ರಕಾಶ್ ರೈ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನಾನು ಮಾಡಬೇಕಾಗಿತ್ತು. ನನಗೆ ಒಂದು ಕಡೆ ಆಶ್ಚರ್ಯ, ಇನ್ನೊಂದು ಕಡೆ ಆ ಪಾತ್ರವನ್ನು ನಾನು ಮಾಡಬಲ್ಲೆನೇ ಎನ್ನುವ ಭಯ. ಆದರೆ,ಅಂದು ಸುದೀಪ್ ಕೊಟ್ಟ ಪ್ರೋತ್ಸಾಹವೇ ಅಂತಹದೊಂದು ಅಭಿನಯ ನನ್ನಿಂದ ಬರಲು ಕಾರಣ.. ಆ ಚಿತ್ರ ಹಿಟ್ ಆದ ಮೇಲೆ ನನ್ನ ಜನಪ್ರಿಯ ಎಷ್ಟರ ಮಟ್ಟಿಗೆ ಹೋಯಿತು ಎಂದರೆ, ನನ್ನನ್ನು ಎಲ್ಲರೂ ಆರ್ಮುಗ ಎಂದೇ ಕರೆಯಲಾರಂಭಿಸಿದರು.

ಇದೇ ವೇಳೆ ಕೆಂಪೇಗೌಡ ಚಿತ್ರದ ಖಡಕ್ ಡೈಲಾಗ್​ಗಳನ್ನು ಉದುರಿಸಿದರು. ಅಷ್ಟೇ ಅಲ್ಲದೆ ತಮ್ಮ ಮಾತೃಭೂಮಿಯಲ್ಲಿಯೂ ಕನ್ನಡಕ್ಕೆ ಪರಾಕ್ ಹೇಳುವುದನ್ನು ಮಾತ್ರ ಮರೆತಿರಲಿಲ್ಲ. ಅದೇ ವೇದಿಕೆಯಲ್ಲಿ ಜೈ ಕನ್ನಡ, ಜೈ ಭುವನೇಶ್ವರಿ ಎಂದು ಘೋಷಣೆಯನ್ನೂ ಕೂಗಿ ತಮ್ಮ ಕನ್ನಡ ಪ್ರೇಮ ಮೆರೆದರು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top