fbpx
ಸಮಾಚಾರ

ಉಲ್ಟಾ ಹೊಡೆದ ಯುವತಿ: ಜೈಲು ಪಾಲಾದ ಸ್ವಾಮೀಜಿ

ಯುವತಿ ಜೊತೆ ಪರಾರಿಯಾಗಿ ಮದುವೆಯಾಗಿ ಬಳಿಕ ಪೊಲೀಸರ ಅತಿಥಿಯಾಗಿದ್ದ ಕೋಲಾರದ ಸ್ವಾಮೀಜಿ ಪ್ರಕರಣ ಹೊಸ ತಿರುವು ಪಡೆದಿದೆ. ದತ್ತಾತ್ರೇಯ ಅವಧೂತ ಅಲಿಯಾಸ್​ ರಾಘವೇಂದ್ರ ಜೊತೆಯಲ್ಲಿದ್ದ ಯುವತಿ ತನ್ನ ಪೋಷಕರ ಒತ್ತಾಯಕ್ಕೆ ಮಣಿದು ತವರು ಮನೆಗೆ ವಾಪಸ್ಸಾಗಿದ್ದಾಳೆ. ಆರೋಪಿ ದತ್ತಾತ್ರೇಯ ಜೈಲು ಪಾಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ಅಲ್ಲದೇ ನನ್ನನ್ನು ವಶೀಕರಣ ಮಾಡಿಕೊಂಡು ತನ್ನ ಜೊತೆ ಕರೆದುಕೊಂಡು ಹೋಗಿದ್ದನು ಎಂದು ಯುವತಿ ಪೊಲೀಸರ ಬಳಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಹೀಗಾಗಿ ಮಧ್ಯರಾತ್ರಿ ಗೌಪ್ಯ ಸ್ಥಳದಿಂದ ಸ್ವಾಮಿಯನ್ನು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಫೆ.27ರಂದು ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ, ಮಠದಿಂದ ಯುವತಿಯೊಂದಿಗೆ ಪರಾರಿಯಾಗಿದ್ದರು. ನಂತರ ಇಬ್ಬರೂ ಮದುವೆಯಾಗಿರುವುದಾಗಿ ಯುವತಿ ಮನೆಯವರಿಗೆ ಸ್ವತಃ ಸ್ವಾಮೀಜಿಯೇ ಮಾಹಿತಿ ನೀಡಿದ್ದರು. ಮೊನ್ನೆಯಷ್ಟೇ ಯುವತಿಯೊಂದಿಗೆ ಪೊಲೀಸರಿಗೆ ಗೋಕರ್ಣದ ಬಳಿ ಸಿಕ್ಕಿಬಿದ್ದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top