fbpx
ಸಮಾಚಾರ

“ಯಾರೂ ಬೈಕೋಬೇಡಿ, ನನಗೂ ಬೇಜಾರು ಆಗ್ತಿದೆ” ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ರಾಧಿಕಾ ಪಂಡಿತ್

ಕಳೆದ ವರ್ಷವೂ ರಾಧಿಕಾ ಪಂಡಿತ್​ ಹುಟ್ಟುಹಬ್ಬಕ್ಕೆ ಒಂದು ದಿನ ಇರುವಾಗಲೇ ತಾವು ಬೆಂಗಳೂರಿನಲ್ಲಿ ಇರುವುದಿಲ್ಲ. ಮುಂದಿನ ಸಲ ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿದ್ದರು. ಆದರೆ ಅಭಿಮಾನಿಗಳಿಗೆ ಈ ವರ್ಷವೂ ನಿರಾಸೆಯಾಗಿದೆ. ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆಗೆ ಆಚರಿಸಿಕೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕ್ಷಮೆ ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ರಾಧಿಕಾ ಶೇರ್ ಮಾಡಿರುವ ವಿಡಿಯೋದಲ್ಲಿ, ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ಬೇರೆ ಜಾಗಗಳಿಂದ, ಬೇರೆ ಊರುಗಳಿಂದ ನನ್ನನ್ನು ಭೇಟಿ ಮಾಡಿ ವಿಶ್ ಮಾಡಲು ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಕೂಡ ಮಿಸ್ ಆಯ್ತು. ಈ ವರ್ಷ ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ಈ ವರ್ಷ ಕೂಡ ನಾನು ನನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಏಕೆಂದರೆ ನನಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಸ್ವಲ್ಪ ಕಷ್ಟ ಎಂದರು.

 

 

View this post on Instagram

 

A post shared by Radhika Pandit (@iamradhikapandit) on

 

ನನಗೂ ಬೇಜಾರಾಗ್ತಿದೆ. ನನ್ನ ಜನ್ಮದಿನವನ್ನು ನಿಮ್ಮ ಜತೆ ಸೆಲೆಬ್ರೇಟ್ ಮಾಡಿಲ್ಲ ಎಂದರೆ ಏನೋ ಒಂಥರ ಅಪೂರ್ಣ ಎನಿಸುತ್ತಿದೆ. ಇಷ್ಟು ವರ್ಷ ನಿಮ್ಮ ಜತೆಗೆ ಆಚರಿಸುತ್ತಾ ಬರುತ್ತಿದ್ದೇನೆ. ಹೀಗಾಗಿ ಕಳೆದ ವರ್ಷದಿಂದಲೂ ನಿಮ್ಮ ಜತೆ ಆಚರಿಸದ ಜನ್ಮದಿನ ಅಪೂರ್ಣ ಎನಿಸುತ್ತಿದೆ ಎಂದು ಬೇಸರ ಹಂಚಿಕೊಂಡಿರುವ ರಾಧಿಕಾ “ಪ್ರಾಮಿಸ್ ಮಾಡ್ತೀನಿ ಮುಂದಿನ ವರ್ಷ ಎಲ್ಲರೂ ಭೇಟಿ ಮಾಡೋಣ. ಅದ್ಧೂರಿಯಾಗಿ ಆಚರಿಸೋಣ” ಎಂದು ಹೇಳಿದ್ದಾರೆ!

‘ನೀವು ಪ್ರೀತಿಯಿಂದ ಮಾಡುತ್ತಿರುವ ಎಲ್ಲ ಮೇಸೇಜ್‌ಗಳನ್ನೂ ನಾನು ಗಮನಿಸುತ್ತಿದ್ದೇನೆ. ಎಲ್ಲವನ್ನೂ ಅಷ್ಟೇ ಪ್ರೀತಿಯಿಂದ ಓದುತ್ತಿದ್ದೇನೆ. ಪ್ರತಿ ಮೆಸೇಜ್‌ಗೂ ಉತ್ತರ ನೀಡುತ್ತೇನೆ. ಈ ವರ್ಷ ನನಗೂ ಬೇಜಾರು ಆಗುತ್ತಿದೆ. ಯಾಕೆಂದರೆ ಪ್ರತಿವರ್ಷ ನಿಮ್ಮೊಂದಿಗೆ ಸೆಲೆಬ್ರೇಟ್‌ ಮಾಡಿ, ಈ ವರ್ಷ ಇಲ್ಲ ಎಂದರೆ ಏನೋ ಒಂಥರ ಅಪೂರ್ಣ ಎನಿಸುತ್ತಿದೆ. ಬೇರೆ ಊರಿಂದ ಬರುವವರಿಗೆ ನಿರಾಸೆ ಆಗಬಾರದು ಎಂದು ಈ ವಿಡಿಯೋ ಮಾಡುತ್ತಿದ್ದೇನೆ’ ಎಂದು ರಾಧಿಕಾ ಪಂಡಿತ್‌ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top