fbpx
ಸಮಾಚಾರ

ಡಾಲರ್ ಎದುರು ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ: ಟೀಕೆಗೆ ಗುರಿಯಾದ ನಳೀನ್ ಕಟೀಲ್

ಅಮೆರಿಕನ್‌ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 74ರ ಗಡಿ ದಾಟಿದೆ. ಶುಕ್ರವಾರದ (ಮಾರ್ಚ್ 5) ದಿನದಂತ್ಯಕ್ಕೆ ಭಾರತೀಯ ರೂಪಾಯಿ ಮೌಲ್ಯ ಡಾಲರ್‌ ಎದುರು 74.20ಕ್ಕೆ ತಲುಪಿದೆ.

 

 

ರೂಪಾಯಿ ಮೌಲ್ಯ ಕುಸಿಯುತ್ತಿದ್ದಂತೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಅಗ್ತಿದೆ. ಸಂಸದರ ಡಾಲರ್ ಲೆಕ್ಕಾಚಾರ ಫೇಸ್ ಬುಕ್ ತುಂಬ ಫೇಮಸ್ ಅಗಿದೆ. ಮಾತಿನ ಭರದಲ್ಲಿ ಡಾಲರ್ ಬಗ್ಗೆ ಹೇಳಿಕೆ ನೀಡಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ನಡುವೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ ಕಂಡಿರೋದು ಕೂಡಾ ಟೀಕೆಗೆ ಕಾರಣವಾಗಿದೆ!

ಏನದು ವಿಡಿಯೋ?
ಕೇರಳದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ನಳೀನ್ ಕುಮಾರ್ ಕಟೀಲ್ ಡಾಲರ್ ಈಗ 60ರೂ ಕೊಡುತ್ತೇವೆ ಮುಂದಿನ ಎರಡು ವರುಷದಲ್ಲಿ ಒಂದು ರೂಪಾಯಿಗೆ 15 ಡಾಲರ್ ಸಿಗುವ ದಿನ ಬರುತ್ತೆ. ಅದಕ್ಕೆ ಕಾರಣ ಮೋದಿ ಆಡಳಿತ ಎಂದೆಲ್ಲಾ ವೈಭವಿಕರಿಸುತ್ತಾ ಭಾರೀ ಭಾಷಣ ಮಾಡಿದ್ದರು. ಅಂದು 60 ರೂಪಾಯಿ ಇದ್ದ ರೂಪಾಯಿ ಮೌಲ್ಯ ಇಂದು 75 ರೂಪಾಯಿ ಹತ್ತಿರಕ್ಕೆ ಬಂದಿದ್ದು ಕಟೀಲ್ ಭಾಷಣ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಅಗ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top