fbpx
ಸಮಾಚಾರ

ನಿಖಿಲ್ ಕುಮಾರಸ್ವಾಮಿ ಮದುವೆಗೆ ಎಚ್ ವಿಶ್ವನಾಥ್ ಆಕ್ಷೇಪ!

ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದರೂ ರಾಜಕೀಯ, ರಾಜಕಾರಣಿಗಳ ಆರ್ಥಿಕ ಬಲ ಜಾಸ್ತಿ ಆಗುತ್ತಿದೆ. ಸಚಿವ ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೆಲ ಐಎಎಸ್‌ ಅಧಿಕಾರಿಗಳ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಮಾಜಿ ಶಾಸಕ ಶಾಸಕ ಎಚ್‌. ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಬಜೆಟ್ ಮಂಡನೆ ದಿನವೇ ರಾಮುಲು ಮಗಳ ಮದುವೆ ಆಯ್ತು. ಬಳ್ಳಾರಿಯಿಂದ ಹಿಡಿದು ಬೆಂಗಳೂರುವರೆಗಿನ ಮದುವೆ ಅದು. ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಮಗನ ಮದುವೆ ತಯಾರಿ ನಡೆಯುತ್ತಿದೆ. ಅದಕ್ಕಾಗಿ 50 ಎಕರೆ ಜಾಗದಲ್ಲಿ ಪೆಂಡಾಲ್ ಹಾಕುತ್ತಿದ್ದಾರೆ. ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥಕ್ಕೆ ಬೇರೆ ದೇಶದಿಂದ ಹೂವಿನ ಹಾರ ತರಿಸಿದ್ದರು. ನಮ್ಮ ರಾಜ್ಯದಲ್ಲೇ ಎಂತೆಂಥ ಹೂವುಗಳಿವೆ. ಆದರೆ ನಿಖಿಲ್​ಗೆ ತನ್ನ ಎಂಗೇಜ್​ಮೆಂಟ್​ಗೆ ಬೇರೆ ದೇಶದ ಹಾರವೇ ಬೇಕಾಗಿತ್ತು.

ಜನರ ಋಣ ತೀರಿಸಲು ಮಗನ ಮದುವೆಗೆ ಸೀರೆ ಇತ್ಯಾದಿ ಕೊಡುತ್ತೀನಿ ಎಂದು ಎಚ್‍ಡಿಕೆ ಹೇಳುತ್ತಿದ್ದಾರೆ. ಜನ ಅವಕಾಶ ಕೊಟ್ಟಾಗ ಸಿಎಂ ಆಗಿದ್ರಲ್ವಾ ಆಗ ಸರ್ಕಾರದ ಕಾರ್ಯಕ್ರಮದ ಮೂಲಕ ಜನರ ಅರ್ಥಿಕ ಬಲ ಮಾಡಬೇಕಿತ್ತು. ಇದರ ಬಗ್ಗೆ ಮಾಧ್ಯಮಗಳು ವಿಶ್ಲೇಷಣೆ ಮಾಡಬೇಕಿದೆ ಎಂದು ಆಗ್ರಹಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top