fbpx
ಸಮಾಚಾರ

“ನನ್ನ ಬಳಿ ಕೂಡ ಜನನ ಪ್ರಮಾಣಪತ್ರವಿಲ್ಲ, ಹಾಗಂತ ನಾನು ಸಾಯಬೇಕಾ?” ಸಿಎಂ ಸ್ಫೋಟಕ ಹೇಳಿಕೆ!

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಾನೂ ಜನನ ಪ್ರಮಾಣಪತ್ರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ನಿನ್ನೆ ಈ ಕುರಿತು ಮಾತನಾಡಿರುವ ಕೆಸಿಆರ್ “ನಾನು ಕುಗ್ರಾಮದ ಮನೆಯೊಂದರಲ್ಲಿ ಹುಟ್ಟಿದ್ದು, ಆ ಕಾಲದಲ್ಲಿ ನಮ್ಮ ಗ್ರಾಮದ ಸುತ್ತ ಯಾವುದೇ ಆಸ್ಪತ್ರೆಗಳಿರಲಿಲ್ಲ. ಹೀಗಾಗಿ ಅಂದಿನ ಪದ್ದತಿಯಂತೆ ಗ್ರಾಮದ ಹಿರಿಯರು ನನ್ನ ‘ಜನ್ಮ ನಾಮಾ’ ಸಿದ್ದಪಡಿಸಿದ್ದು, ಅದಕ್ಕೆ ಯಾವುದೇ ಅಧಿಕೃತ ಮುದ್ರೆ ಇಲ್ಲ ಎಂದು ಕೆಸಿಆರ್ ಹೇಳಿದ್ದಾರೆ.

ನನ್ನ ಬಳಿಯೇ ಜನನ ಪ್ರಮಾಣಪತ್ರ ಇಲ್ಲ ಎಂದ ಮೇಲೆ ರಾಜ್ಯದ ಬಡ ಜನರ ಬಳಿ ಜನನ ಪ್ರಮಾಣಪತ್ರ ಎಲ್ಲಿಂದ ಬರಬೇಕು ಎಂದು ಕೇಳಿದ ಕೆಸಿಆರ್, ಕೇಂದ್ರ ಸರ್ಕಾರದ ಹೊಸ ಎನ್‌ಪಿಆರ್ ನೀತಿ ಹಲವು ಗೊಂದಲಗಳನ್ನು ಸೃಷ್ಟಿಸಲಿದೆ . ಈ ರೀತಿ ವಿವಾದಾತ್ಮಕ ಕಾಯ್ದೆಯನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರವು ಸಮಾಜದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಇದರ ಬದಲು ರಾಷ್ಟ್ರೀಯ ಗುರುತು ಪತ್ರವನ್ನು ಪರಿಚಯಿಸಬೇಕು ಎಂದು ಕೆಸಿಆರ್ ಸಲಹೆ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top