fbpx
ಸಮಾಚಾರ

ನಡೆದಾಡುವ ದೇವತೆ ಮಾತಾ ಮಾಣಿಕೇಶ್ವರಿ ಲಿಂಗೈಕ್ಯ!

ನಡೆದಾಡುವ ದೇವತೆ ಎಂದೇ ಖ್ಯಾತಿ ಪಡೆದಿದ್ದ ಮಾಣಿಕೇಶ್ವರಿ ಅವರು ಸೇಡಂ ತಾಲೂಕಿನ ಯಾನಾಗುಂದಿಲ್ಲಿ ಶನಿವಾರ ತಡರಾತ್ರಿ ಲಿಂಗೈಕ್ಯರಾದರು. ಇತ್ತೀಚೆಗಷ್ಟೇ ಶಿವರಾತ್ರಿ ದಿನದಂದು ಮಾಣಿಕೇಶ್ವರಿ ಭಕ್ತರಿಗೆ ದರ್ಶನ ನೀಡಿದ್ದರು. ಪ್ರತಿ ವರ್ಷ ಶಿವರಾತ್ರಿಯಂದು ಅವರು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಆದರೆ, ಈ ಬಾರಿ ಅವರು ಭಕ್ತರಿಗೆ ಯಾವುದೆ ಸಂದೇಶ ನೀಡಿರಲಿಲ್ಲ. ಅಂದು ತಾವು ಶೀಘ್ರವೇ ಲಿಂಗೈಕ್ಯರಾಗುವುದಾಗಿ ಹೇಳಿದ್ದರಂತೆ.

ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು [ಶನಿವಾರ] ಲಿಂಗೈಕ್ಯರಾಗಿದ್ದಾರೆ.

ಮಾತಾ ಮಾಣಿಕೇಶ್ವರಿ ಅಮ್ಮನವರು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿದ್ದರು. ಅವರು ಶಿವರಾತ್ರಿಯಂದು ಭಕ್ತರಿಗೆ ಕೊನೆಯದಾಗಿ ದರ್ಶನ ಕೊಟ್ಟಿದ್ದರು. ಅಮ್ಮನವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಭಕ್ತರು ದೌಡಾಯಿಸುತ್ತಿದ್ದಾರೆ.

ಮಾಣಿಕೇಶ್ವರಿ ಅಂತಿಮ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬರುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಅಂತಿಮ ಇಚ್ಛೆಯಂತೆ ಶಿವಲಿಂಗದ ಬಳಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಾಳೆ ಮದ್ಯಾಹ್ನವೇ ಅಂತ್ಯಕ್ರಿಯೆ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top