fbpx
ಸಮಾಚಾರ

ತಮ್ಮ ಟ್ವಿಟ್ಟರ್ ಖಾತೆಯನ್ನು 7 ಸಾಧಕಿಯರಿಗೆ ಬಿಟ್ಟುಕೊಟ್ಟ ಪ್ರಧಾನಿ ನರೇಂದ್ರ ಮೋದಿ!

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸೋಷಿಯಲ್ ಮೀಡಿಯಾ ಖಾತೆಗಳನ್ನ ಮಹಿಳೆಯರು ನಿರ್ವಹಿಸಲಿದ್ದಾರೆ. ಇಂದು ಬೆಳಗ್ಗೆ ಮೋದಿ ತಮ್ಮ ಅಕೌಂಟ್​​ಗಳಿಂದ ಸೈನ್ ಆಫ್ ಮಾಡಿದ್ದು, ದೇಶದ 7 ಸಾಧಕಿಯರು ಇಂದು ಇಡೀ ದಿನ ನನ್ನ ಅಕೌಂಟ್​​ನಿಂದ ಪೋಸ್ಟ್​ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ ತನ್ನ ಟ್ವಿಟರ್ ಖಾತೆಯನ್ನು ಏಳು ಸ್ಫೂರ್ತಿದಾಯಕ ಮಹಿಳೆಯರಿಗೆ ನಿರ್ವಹಿಸುವ ಅವಕಾಶ ನೀಡುವುದಾಗಿ ಹೇಳಿದ್ದರು.. ಹೀಗಿರುವಾಗ ಮೋದಿ ಖಾತೆ ಯಾರು ನಿಭಾಯಿಸುತ್ತಾರೆಂಬ ಕುತೂಹಲ ಇಡೀ ದೇಶದಾದ್ಯಂತ ಮನೆ ಮಾಡಿತ್ತು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮೋದಿ ಖಾತೆಯಿಂದ ಚೆನ್ನೈನ ಸ್ನೇಹಾ ಮೊದಲ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ದೇಶದ ಎಲ್ಲ ಮಹಿಳೆಯರಿಗೆ ಶುಭ ಕೋರಿದ್ದು, ಈ ಹಿಂದಿನ ತಮ್ಮ ಮಾತನ್ನು ನೆನಪು ಮಾಡಿಕೊಳ್ಳುತ್ತಾ, ನಾನು ಸಾಮಾಜಿಕ ಜಾಲತಾಣಗಳ ದೂರ ಉಳಿಯುತ್ತಿದ್ದೇನೆ. ನನ್ನ ಟ್ವಿಟರ್ ಖಾತೆಯ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಗೈದ ಮಹಿಳಾ ಮಣಿಯರಿಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮೊದಲಿಗೆ ಚೆನ್ನೈನ ಸ್ನೇಹಾ ಅನ್ನೋರಿಗೆ ಮೋದಿಯ ಟ್ವಿಟರ್​​ ಹ್ಯಾಂಡಲ್​ ಮಾಡೋ ಅವಕಾಶ ಸಿಕ್ಕಿದ್ದು, ಈಗಾಗಲೇ ಅವರು ಮಾರ್ನಾಲ್ಕು ಟ್ವೀಟ್​ಗಳನ್ನ ಮಾಡಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top