fbpx
ಸಮಾಚಾರ

“ಬ್ರಾಹ್ಮಣರಿಗೆ ಮಾತ್ರ” ವಿವಾದ ಹುಟ್ಟುಹಾಕಿದ ಕೇರಳದ ದೇವಾಲಯದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಶೌಚಾಲಯ!

ಕೇರಳದ ಸ್ಥಳೀಯ ದೇವಾಲಯವೊಂದರ ಹೊರ ಆವರಣದಲ್ಲಿದ್ದ ‘ಬ್ರಾಹ್ಮಣರಿಗೆ ಮಾತ್ರ ಶೌಚಾಲಯದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕೇರಳದ ಕುಟ್ಟುಮುಕ್ಕು ಮಹಾದೇವ ದೇವಾಲಯದಲ್ಲಿ ಮೂರು ಶೌಚಾಲಯಗಳಿದ್ದು, ಅವುಗಳ ಮೇಲೆ ಪುರುಷರಿಗೆ, ಮಹಿಳೆಯರಿಗೆ ಮತ್ತು ಬ್ರಾಹ್ಮಣರಿಗೆ ಮಾತ್ರ ಎಂಬಂತಹ ನಾಮಫಲಕಗಳನ್ನು ಹಾಕಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಇದೊಂದು ಅನೈತಿಕ ಪದ್ಧತಿಯಾಗಿದ್ದು, ಪ್ರಗತಿಪರ ರಾಜ್ಯಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು ಎರಡು ದಶಕಗಳ ಹಿಂದಿನಿಂದಲೇ ಬೋರ್ಡ್ ಇದೆ. ಇದರ ವಿರುದ್ಧ ಯಾರೂ ಈವರೆಗೆ ದೂರು ನೀಡಿಲ್ಲ ಎಂದು ದೇವಾಲಯ ಸಮಿತಿಯ ಅಧಿಕಾರಿ ಕಣ್ಣನ್ ಹೇಳಿದ್ದಾರೆ. ಆ ನಿರ್ದಿಷ್ಟ ಶೌಚಾಲಯವನ್ನು ಪುರೋಹಿತರು ಮತ್ತು ಇತರ ದೇವಾಲಯದ ನೌಕರರು ಬಳಸುತ್ತಿದ್ದರು. ಇದೀಗ ಅದನ್ನು ತೆಗೆದುಹಾಕಿ ಮತ್ತು ಸಿಬ್ಬಂದಿಗಳು ಮಾತ್ರ ಎಂಬ ಬೋರ್ಡ್ ಅನ್ನು ಅಂಟಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top