fbpx
ಸಮಾಚಾರ

ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಟ ಅನಿರುದ್ಧ್

ಜೊತೆ ಜೊತೆಯಲಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ಅನಿರುದ್ಧ್ ಅವರು ಆಗಾಗ ಬರೆಯುವುದನ್ನೂ ರೂಢಿಸಿಕೊಂಡಿದ್ದಾರೆ, ಹಾಗೇ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ. ಅದರ ಭಾಗವಾಗಿ ಇದೀಗ ಅವರು ಪ್ರಧಾನಿ ಮೋದಿಗೆ ಇ-ಮೇಲ್ ಮಾಡುವ ಮೂಲಕ ಒಂದು ಮನವಿ ಮಾಡಿದ್ದಾರೆ.

94 ವರ್ಷ ನಿವೃತ್ತ ಯೋಧನಿಗೆ ಮನೆ ಇಲ್ಲ ಎನ್ನುವ ವಿಚಾರ ತಿಳಿದುಕೊಂಡ ಅನುರುದ್ಧ್, ಈ ಬಗ್ಗೆ ಒಂದು ಲೇಖನ ಬರೆದಿದ್ದರು. ಅಷ್ಟೆಯಲ್ಲ ಈಗ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಅಂದರೆ ಈ ಲೇಖನವನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಲಯಕ್ಕೆ ಇ-ಮೇಲ್ ಮಾಡಿದ್ದಾರೆ.

ನಟ ಅನಿರುದ್ಧ್ ಅವರು ಮೇಲ್ ಮಾಡಿರುವ ಪ್ರತಿಯನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ಪ್ರಧಾನ ಮಂತ್ರಿ ಅವರಿಗೆ ಮೇಲ್ ಮಾಡಿದ್ದೇನೆ. ಕಾರ್ಯನಿರ್ವಹಣೆ ಆಗುತ್ತೆ ಎನ್ನುವ ಆಶಯ’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top