fbpx
ಸಮಾಚಾರ

ತಾಯಿ ಇಲ್ಲದೆ ಅನಾಥವಾಗಿದ್ದ ಹೆಣ್ಣು ಆನೆ ಮರಿಯನ್ನು ದತ್ತು ಪಡೆದ ದಂಪತಿ!

ಈ ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದು, ಹೆಣ್ಣು ಮಕ್ಕಳಿಲ್ಲ ಎಂಬ ಕೊರಗು ಇತ್ತು. ಹೀಗಾಗಿ ವಿಶ್ವ ಮಹಿಳಾ ದಿನಾಚರಣೆ ದಿನ ದಂಪತಿ ತಾಯಿ ಇಲ್ಲದ ತಬ್ಬಲಿಯನ್ನು ಮಗಳಾಗಿ ದತ್ತು ಪಡೆದಿದ್ದಾರೆ. ಜೊತೆಗೆ ಮಗಳಿಗೆ ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನದಂದು ಹೆಣ್ಣು ಆನೆಮರಿಯನ್ನು ದತ್ತು ಪಡೆಯಬೇಕು ಎಂದು ಮೊದಲೇ ನಿರ್ಧರಿಸಿದ್ದ ದಿನೇಶ್‌ ಅವರು, ಭಾನುವಾರ ಪತ್ನಿ ಸಮೇತ ಉದ್ಯಾನಕ್ಕೆ ಆಗಮಿಸಿ, ದತ್ತು ಪಡೆಯುವ ಪ್ರಕ್ರಿಯೆ ಪೂರೈಸಿದರು. ಉದ್ಯಾನಕ್ಕೆ 1,75,000 ರೂ.ಗಳನ್ನು ನೀಡಿ ದತ್ತು ಪಡೆದರು. ಇದೇ ವೇಳೆ ಆನೆ ಮರಿಯನ್ನು ‘ಸರಸ್ವತಿ’ ಎಂದು ನಾಮಕರಣ ಮಾಡಲಾಯಿತು.

ಒಂದು ವರ್ಷಕ್ಕೆ 1 ಲಕ್ಷ 75 ಸಾವಿರ ಹಣವನ್ನು ದಿನೇಶ್ ನೀಡಿದ್ದಾರೆ. ಅವರ ಜೀವಿತಾವಧಿ ಇರುವರೆಗೆ ಆನೆಯನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಆನೆ ಜೊತೆಗೆ ಕೆಲ ಕಾಲ ಕಳೆದು ಅದಕ್ಕೆ ಹಾಲು ಕುಡಿಸಿದ್ದಾರೆ.

ಈ ಕರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ದಿನೇಶ್, ನನ್ನ ಎರಡು ಗಂಡು ಮಕ್ಕಳ ಜೊತೆ ಮತ್ತೊಬ್ಬ ಮಗಳು ನಮ್ಮ ಕುಟುಂಬ ಸೇರಿಕೊಂಡಿದ್ದಾಳೆ. ಅದು ವಿಶ್ವ ಮಹಿಳಾ ದಿನಾಚರಣೆಯಂದು ನಮ್ಮ ಕುಟುಂಬಕ್ಕೆ ಬಂದಿರುವುದು ಸಂತಸ ತಂದಿದೆ. ನಾನು ಹಾಗೂ ನನ್ನ ಪತ್ನಿ ಮಗಳು ಸರಸ್ವತಿಯನ್ನು ಕಂಡು ಕಾಲ ಕಳೆದದ್ದು, ಹಾಲು ಕುಡಿಸಿದ್ದು ತುಂಬಾ ಸಂತೋಷವಾಗಿದೆ ಎಂದು ದಿನೇಶ್ ಅಭಿಪ್ರಾಯ ಹಂಚಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top