fbpx
ಸಮಾಚಾರ

ಅಂಧ ಸೋದರಿಯರ ಮನೆಗೆ ಜಗ್ಗೇಶ್-ಪರಿಮಳ ಹೆಸರು!

ನಟ ಜಗ್ಗೇಶ್ ಕಷ್ಟದಲ್ಲಿರುವವರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಹೌದು ಇದೀಗ ಅಂಧ ಸಹೋದರಿಯರಿಗೆ ಕೊಟ್ಟ ಮಾತಿನಂತೆ ಜಗ್ಗೇಶ್ ಅವರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದೀಗ ಆ ಅಂಧ ಸೋದರಿಯರ ಮನೆಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜಗ್ಗೇಶ್ ಅಭಿಮಾನಿಗಳು ಅಂಧ ಸಹೋದರಿಗೆ ಕಟ್ಟಿಸಿರುವ ಮನೆಯ ಫೋಟೋವನ್ನು ಟ್ವಿಟ್ಟರ್ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅಂಧ ಸಹೋದರಿಯರಿಗೆ ಕಟ್ಟಿಸಿರುವ ಮನೆಯ ಮೇಲೆ ‘ಜಗ್ಗೇಶ್ ಪರಿಮಳ ನಿಲಯ’ ಎಂದು ಬರೆಯಲಾಗಿದೆ. ಗೋಡೆಯ ಮೇಲೆ ಬಣ್ಣ ಬಣ್ಣದಲ್ಲಿ ಸಂಗೀತಾಕ್ಷರದ ಸಂಕೇತಗಳನ್ನು ಬಿಡಿಸಲಾಗಿದೆ. ತಾರಸಿಯಲ್ಲಿ ಕನ್ನಡ ಧ್ವಜವನ್ನು ನೆನಪಿಸುವ ಹಳದಿ-ಕೆಂಪು ಬಣ್ಣವನ್ನು ಬಳಿಯಲಾಗಿದೆ.

ಅಂದಹಾಗೆ ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ರಿಯಾಲಿಟಿ ಶೋ ‘ಸರಿಗಮಪ-17’ರಲ್ಲಿ ಅಂಧ ಗಾಯಕ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತಮ್ಮ ಧ್ವನಿ ಮೂಲಕ ಪ್ರೇಕ್ಷಕರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. ಕಷ್ಟದಲ್ಲಿರುವ ಈ ಗಾಯಕಿಯರ ನೆರವಿಗೆ ಜಗ್ಗೇಶ್ ಮುಂದಾಗಿದ್ದು, ಸ್ವಂತ ಸೂರು ನಿರ್ಮಿಸಿಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top