fbpx
ಸಮಾಚಾರ

ಕಪ್ ಗೆಲ್ಲಿಸುವಂತೆ ಚಾಮುಂಡೇಶ್ವರಿ ಮೊರೆ ಹೋದ ಆರ್‌ಸಿಬಿ ಅಭಿಮಾನಿಗಳು!

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಕ್ರಿಕೆಟ್ ಪಂದ್ಯಾವಳಿಯ 13 ನೇ ಆವೃತ್ತಿ ಸಮೀಪಿಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಭಿಮಾನಿಗಳು ತಮ್ಮ ತಂಡಕ್ಕೆ ದೇವರು ಆಶೀರ್ವದಿಸಲಿ ಎಂದು ಟೆಂಪಲ್ ರನ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಆರ್‌ಸಿಬಿ ಬ್ಯಾನರ್ ಹಿಡಿದು ಯುವಕರು ಪೂಜೆ ಮಾಡಿದ್ದಾರೆ. ಇಬ್ಬರು ಯುವಕರು ಬ್ಯಾನರ್ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಯುವಕ ಬ್ಯಾನರಿಗೆ ಪೂಜೆ ಮಾಡಿದ್ದಾನೆ.

 

 

ವಿಡಿಯೋದಲ್ಲಿ, ನೋಡು ತಾಯಿ. ನಾನು ಕೆಲಸ ಕೊಡು ಅಂತ ಕೇಳುತ್ತಿಲ್ಲ, ಹಳೆ ಹುಡುಗಿ ವಾಪಸ್ ಬರಲಿ ಎಂದು ನಾನು ಕೇಳುತ್ತಿಲ್ಲ. ಆದರೆ ಈ ಬಾರಿ ನಮ್ಮ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆಲ್ಲುವ ಹಾಗೆ. ನಾಯಿ ಕಣ್ಣು, ನರಿ ಕಣ್ಣು ಎಲ್ಲರ ಕಣ್ಣು, ದುಷ್ಮನ್ ಕಣ್ಣುಗಳೆಲ್ಲಾ ಹೋಗಲಿ ಎಂದು ದೃಷ್ಟಿ ತೆಗೆಯುತ್ತೇನೆ. ಮಾಡಿಲ್ಲ ತಪ್ಪು ಈ ಸಲ ಬರಬೇಕು ನಮಗೆ ಕಪ್ಪು. ತಾಯಿ ಈ ಸಲ ಕಪ್ ಗೆಲ್ಲುವ ಹಾಗೆ ಮಾಡು ಎಂದು ದೇಗುಲದ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳು ದೇವರಿಗೆ ಈಡುಗಾಯಿ ಒಡೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top