fbpx
ಸಮಾಚಾರ

ಕೊರೊನಾ ಎಫೆಕ್ಟ್: ಶೂಟಿಂಗ್ ಸ್ಥಳ ಬದಲಾಯಿಸಿದ ‘ರಾಬರ್ಟ್’ ಚಿತ್ರತಂಡ

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಇದೀಗ ಕರ್ನಾಟಕದಲ್ಲಿ ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನದ ‘ರಾಬರ್ಟ್’ ಸಿನಿಮಾಗೂ ಕೊರೊನಾ ವೈರಸ್ ಭೀತಿ ಉಂಟಾಗಿದೆ.

ರಾಬರ್ಟ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿ ಮುಗಿದಿಲ್ಲ. ಕೆಲದಿನಗಳ ಹಿಂದೆ ಈ ತಂಡ ವಾರಣಾಸಿಗೆ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿತ್ತು. ಇನ್ನು ಕೆಲ ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ವಿದೇಶಗಳಿಗೆ ಹೋಗಬೇಕಾಗಿತ್ತು. ಆದರೆ ವಿದೇಶದಲ್ಲಿ ಕೊರೊನಾ ವೈರಸ್, ತನ್ನ ಪ್ರತಾಪವನ್ನು ತೋರಿಸುತ್ತಿರೋದರಿಂದ ರಾಬರ್ಟ್ ಸಿನಿಮಾ ತಂಡ ಸುಮ್ಮನಿರುವಂತಾಗಿದೆ.

ಸ್ಪೇನ್‌ನಲ್ಲಿ ಈ ಚಿತ್ರದ ಹಾಡುಗಳ ಶೂಟಿಂಗ್ ನಡೆಯಬೇಕಾಗಿತ್ತು.ಆದರೆ ಇದೀಗ ಯುರೋಪಿನಲ್ಲಿ ಕೊರೋನಾ ವೈರಸ್ ನಿಂದಾಗಿ ಚಿತ್ರೀಕರಣದ ಸ್ಥಳ ಬದಲಾಗಿದೆ. ಚಿತ್ರದ ಶೂಟಿಂಗ್ ಎಲ್ಲಾ ಅಂದುಕೊಂಡಂತಾಗಿದ್ರೆ ಸ್ಪೇನ್ ನಲ್ಲಿ ನಡೀಬೇಕಿತ್ತು. ಆದ್ರೆ ಕೊರೊನಾ ವೈರಸ್ ಭೀತಿಯಿಂದ ಶೂಟಿಂಗ್ ಮುಂದೂಡಲಾಗಿತ್ತು. ಇದೀಗ ಈ ಸಾಂಗ್ ಶೂಟಿಂಗ್ ಗುಜರಾತ್​ನ ಕಚ್ ಜಿಲ್ಲೆಯಲ್ಲಿ ನಡೀತಿದ್ದು ಈ ಹಾಡಿನ ಮೂಲಕವೇ ರಾಬರ್ಟ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top