fbpx
ಸಮಾಚಾರ

ಕೊರೋನಾ ನಿರ್ವಹಣೆಯಲ್ಲಿ ದೇಶದಲ್ಲೇ BSYಗೆ 2ನೇ ಸ್ಥಾನ: ಯಾವ ರಾಜ್ಯದ ಸಿಎಂಗೆ ಎಷ್ಟನೇ ಸ್ಥಾನ?

ಕೊರೋನಾ ವೈರಸ್‌ ದೇಶದಲ್ಲಿ ತೀವ್ರಗೊಂಡಿರುವ ಈ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಕರ್ನಾಟಕದ ಬಿ.ಎಸ್‌. ಯಡಿಯೂರಪ್ಪ ದೇಶದಲ್ಲೇ 2ನೇ ಸ್ಥಾನ ಗಳಿಸಿದ್ದಾರೆ. ಟೈಮ್ಸ್ ನೌ ಸುದ್ದಿವಾಹಿನಿ ಹಾಗೂ ಒಆರ್ ಮ್ಯಾಕ್ಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಇದಾಗಿವೆ!

 

 

ಈ ಕುರಿತಾಗಿ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಬಿಎಸ್‌ ಯಡಿಯೂರಪ್ಪ ಕೋವಿಡ್‌ ವಾರಿಯರ್ಸ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಸಚಿವ ಸಂಪುಟದ ಸದಸ್ಯರು, ಎಲ್ಲ ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ ವರ್ಗ, ಎಲ್ಲ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಪೌರ ಕಾರ್ಮಿಕರು, ಚಾಲಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಹಂತದ ಕೊರೊನ ವಾರಿಯರ್ಸ್ ಗಳ ಶ್ರಮಕ್ಕೆ & ನಾಡಿನ ಜನತೆಗೆ ಮುಖ್ಯಮಂತ್ರಿಗಳು ಧನ್ಯವಾದ ಸಲ್ಲಿಸಿದ್ದಾರೆ.

ದೇಶದ ಆಯ್ದ ಆರು ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು ಮೊದಲನೇ ಸ್ಥಾನವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಡೆದುಕೊಂಡಿದ್ದು ಎರಡನೇ ಸ್ಥಾನವನ್ನು ಬಿಎಸ್ ಯಡಿಯೂರಪ್ಪನವರು ಪಡೆದುಕೊಂಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ತಮಿಳುನಾಡು ಸಿಎಂ ಪಳನಿಸ್ವಾಮಿ ನಾಲ್ಕನೇ ಸ್ಥಾನದಲ್ಲಿ, ಮಹಾರಾಷ್ಟ್ರದ ಸಿಎಂ ಉದ್ದವ್ ಠಾಕ್ರೆ ಐದನೇ ಸ್ಥಾನದಲ್ಲಿ ಹಾಗೂ ಕೊನೆಯ ಸ್ಥಾನದಲ್ಲಿ ಮಮತಾ ಬ್ಯಾನರ್ಜಿ (ಶೇ.6 ) ಇದ್ದಾರೆ.

ಕೊರೋನಾ ನಿರ್ವಹಣೆ; ಯಾರಿಗೆ ಎಷ್ಟು ಮತ?
1. ದಿಲ್ಲಿ- ಅರವಿಂದ ಕೇಜ್ರಿವಾಲ್‌- ಶೇ.65
2. ಕರ್ನಾಟಕ- ಬಿ.ಎಸ್‌. ಯಡಿಯೂರಪ್ಪ- ಶೇ.56
3. ತೆಲಂಗಾಣ- ಕೆ. ಚಂದ್ರಶೇಖರರಾವ್- ಶೇ.49
4. ತಮಿಳುನಾಡು- ಎಡಪ್ಪಾಡಿ ಪಳನಿಸ್ವಾಮಿ- ಶೇ.40
5. ಮಹಾರಾಷ್ಟ್ರ- ಉದ್ಧವ ಠಾಕ್ರೆ- ಶೇ.35
6. ಪ.ಬಂಗಾಳ- ಮಮತಾ ಬ್ಯಾನರ್ಜಿ- ಶೇ.6

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top