fbpx
ಸಮಾಚಾರ

ಸಿತಾರಾ ಮದುವೆಯಾಗದೆ ಅವಿವಾಹಿತೆಯಾಗಿಯೇ ಉಳಿದಿದ್ದೇಕೆ? ಮನಬಿಚ್ಚಿ ಮಾತನಾಡಿದ ಬಹುಭಾಷಾ ನಟಿ

ತೊಂಬತ್ತರ ದಶಕದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯಾಗಿದ್ದವರು ಬಹುಭಾಷಾ ನಟಿ ಸಿತಾರಾ. ಅಂದವಾದ ಮುಖ, ಸೆಳೆಯುವ ಕಂಗಳು, ಮಿಂಚಿನ ನೋಟ, ಕಿರುನಗೆಯ ಮೂಲಕವೇ ಸಾವಿರಾರು ಯುವಕರ ಗುಂಡಿಗೆಗೆ ಗುಂಡಿಟ್ಟಿದ್ದ ಸಿತಾರಾ ಈಗಲೂ ಒಂಟಿಯಾಗಿಯೇ ಇದ್ದಾರೆ ಎನ್ನುವ ವಿಷಯ ಅನೇಕರಿಗೆ ಗೊತ್ತಿರುವುದಿಲ್ಲ. ಹೌದು, 42ವರ್ಷ ವಯಸ್ಸಿನ ಸಿತಾರಾ ಇಲ್ಲಿಯವರೆಗೂ ಮದುವೆಯಾಗದೆ ಹಾಗೆಯೇ ಉಳಿದುಕೊಂಡಿದ್ದಾರೆ.. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ಮದುವೆಯಾಗದೆ ಹಾಗೆ ಉಳಿಯಲು ಕಾರಣವೇನು ಅಂತೀರಾ ಮುಂದೆ ಓದಿ.

ಆ ಸಮಯದಲ್ಲಿ ಭಾರತದ ಅತಿ ಸುಂದರ ನಟಿಯರಲ್ಲಿ ಸಿತಾರಾ ಕೂಡ ಒಬ್ಬಳು, ಸಿನಿಮಾ ಕ್ಷೇತ್ರದಲ್ಲಿ ಇವರು ಸೃಷ್ಟಿಸಿದ್ದ ಸಂಚಲನದಿಂದಾಗಿ ಯಾವುದೇ ಸಾಲು ಸಾಲು ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದವು. ಸೌತ್ ಸಿನಿ ದುನಿಯಾದ ಬಿಗ್ ಸ್ಟಾರ್ ಹೀರೋಗಳ ಜೊತೆಯಲ್ಲೆಲ್ಲಾ ನಾಯಕಿಯಾಗಿ ಬಣ್ಣ ಹಚ್ಚಿರುವ ಜೀವನದಲ್ಲಿ ಕೆಲವು ಆಕಸ್ಮಿಕ ಕಹಿ ಘಟನೆಗಳು ಕೂಡ ನಡೆದಿವೆ.. ಅಷ್ಟಕ್ಕೂ ತಾವು ಇಲ್ಲಿಯವರೆಗೂ ಮದುವೆಯಾಗದೇ ಉಳಿದುಕೊಂಡಿರುವುದು ಯಾಕೆ? ಮದುವೆಯಾಗದಿರಲು ಕಾರಣವೇನು? ಎಂಬುದನ್ನು ಸ್ವತಃ ಅವರೇ ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ..

ಸಿತಾರಾ ಅವರ ತಂದೆಯ ಹೆಸರು ಪರಮೇಶ್ವರನ್‌ ನಾಯರ್. ಅವರು ಕೇರಳದ ವಿದ್ಯುಚ್ಚಕ್ತಿ ಮಂಡಳಿಯಲ್ಲಿ ಎಂಜಿನಿಯರ್‌ ಆಗಿದ್ದರಂತೆ. ಅಮ್ಮ ಕೂಡ ಅದೇ ಮಂಡಳಿಯಲ್ಲಿ ಅಧಿಕಾರಿಯಾಗಿದ್ದರು. ಅಪ್ಪನೇ ಅವರ ಪಾಲಿನ ಸರ್ವಸ್ವವಾಗಿದ್ದರು. ಸಿತಾರಾ ಹದಿಹರೆಯದಲ್ಲಿದ್ದ ಇದ್ದಾಗ ಅಪ್ಪ ಮೃತಪಟ್ಟಿದ್ದರಿಂದ ಮದುವೆಯ ಆಲೋಚನೆಯಿಂದ ಅವರು ದೂರ ಸರಿದರಂತೆ.

‘ಅಪ್ಪ ನನ್ನ ಜೀವನದ ಗುರುವಾಗಿದ್ದರು. ಅಂತಹ ವ್ಯಕ್ತಿಯನ್ನೇ ಕಳೆದುಕೊಂಡಾಗ ನನ್ನ ಬದುಕಿಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿಲ್ಲ ಎಂದು ನಿರ್ಧರಿಸಿದೆ. ಹಾಗಾಗಿಯೇ, ಸಪ್ತಪದಿ ತುಳಿಯಲು ಮನಸ್ಸು ಮಾಡಲಿಲ್ಲ. ಇಂದಿಗೂ ನನಗೆ ಮದುವೆ ಬಗ್ಗೆ ಆಸಕ್ತಿಯೇ ಇಲ್ಲ’ ಎಂದು ಹೇಳಿದ್ದಾರೆ ಸಿತಾರಾ.

ಸಿತಾರಾ ತಂದೆ ಬದುಕಿದ್ದಿದ್ದರೆ ಮದುವೆ ಮಾಡುತ್ತಿದ್ದರೇನೋ, ಆದರೆ ಅದಾಗಲಿಲ್ಲ. ಹಾಗೆಯೇ ಕಾಲ ಸರಿದು ಹೋಯಿತು. ಸಿತಾರಾ ಸಹ ಸಿನಿಮಾಗಳಲ್ಲಿ ಬ್ಯುಸಿ ಆದ ಕಾರಣ ಮದುವೆಯತ್ತ ಗಮನವೇ ಹರಿಯಲಿಲ್ಲ. ಹೀಗೆಯೇ ಸಮಯ ಉರುಳಿ ಈಗ ಸಿತಾರಾ ಅವರಿಗೆ 46 ವರ್ಷ ವಯಸ್ಸು.

ಸಿತಾರಾ ಮದುವೆಯಾಗುವುದಿಲ್ಲವೇ?
“ನಾನು ಈಗಲೂ ಸಿಂಗಲ್ ಆಗಿಯೇ ಇದ್ದೇನೆ, ಹಾಗಂತ ಮದುವೆಯಾಗಲು ಇದು ಸೂಕ್ತ ಸಮಯವಲ್ಲ. ಮದುವೆಯಾಗಬೇಕಲ್ಲಾ ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ನನ್ನಿಂದ ಸಾಧ್ಯವಿಲ್ಲ.. ಮದುವೆಯಾಗಲು ಈತನೇ ಸರಿಯಾದ ವ್ಯಕ್ತಿ ಎಂದು ನನ್ನ ಮನಸ್ಸು ನನಗೆ ಹೇಳಬೇಕು ಅಂತವರು ಸಿಗಬೇಕು.. ಹಾಗೊಮ್ಮೆ ನಾನು ಮದುವೆಯಾದರೆ, ನನ್ನ ಸಹೋದರ ಮತ್ತು ತಾಯಿ ಹೆಚ್ಚು ಸಂತೋಷಪಡುತ್ತಾರೆ.” ಎಂದು ಹೇಳುತ್ತಾರೆ ಸಿತಾರಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top