fbpx
ಸಮಾಚಾರ

ಶಂಕರ್‌ ನಾಗ್ ಕಾರು ಅಪಘಾತದ ಬಗ್ಗೆ ಮಾತನಾಡಿದ ರಾಮಾಯಣದ ಸೀತೆ ದೀಪಿಕಾ

ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ದೀಪಿಕಾ ಚಿಕ್ಲಿಯಾ ಅವರು ಹೊಸ ಜೀವನ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. 1990ರಲ್ಲಿ ಈ ಚಿತ್ರ ತೆರೆಕಂಡಿತ್ತು. ಅದೇ ವರ್ಷ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಶಂಕರ್ ನಾಗ್ ಅವರ ಸಾವಿನ ಕುರಿತಂತೆ ದೀಪಿಕಾ ಚಿಕ್ಲಿಯಾ ಅವರು ಮಾತನಾಡಿದ್ದಾರೆ.

‘ಹೊಸ ಜೀವನ’ ಚಿತ್ರದ ‘ಲಾಲಿ ಲಾಲಿ ಲಾಲಿ ಜೋ… ನನ್ನ ಬಾಳಿನ ಬಂಗಾರ ಜೋ..’ ಹಾಡನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ದೀಪಿಕಾ, ‘ಈ ಹಾಡು ‘ಹೊಸ ಜೀವನ’ ಚಿತ್ರದ್ದು. ಈ ಸಿನಿಮಾದ ಲಾಸ್ಟ್ ಶೆಡ್ಯೂಲ್‌ ಮುಗಿಸಿದ ನಂತರ ನಟ ಶಂಕರ್ ನಾಗ್ ಅವರ ಕಾರು ಅಪಘಾತವಾಗಿ, ಅವರು ಮೃತರಾದರು. ಆ ಸುದ್ದಿ ಕೇಳಿ ನಾನು ಶಾಕ್‌ಗೆ ಒಳಗಾಗಿದ್ದೆ. ಅದರಿಂದ ಹೊರಬರಲು ತುಂಬ ಸಮಯ ಬೇಕಾಯ್ತು. ‘ಹೊಸ ಜೀವನ’ ನನ್ನ ಕರಿಯರ್‌ನ ದೊಡ್ಡ ಹಿಟ್ ಸಿನಿಮಾ. ಆದರೆ, ಶಂಕರ್ ನಾಗ್ ಇಲ್ಲದಿರುವ ನೋವು ಕಾಡುತ್ತದೆ’ ಎಂದಿದ್ದಾರೆ.

12 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ ಸುಮಾರು 90 ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದರಲ್ಲಿ ಅನೇಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು. ಇದು ಚಿತ್ರರಂಗದಲ್ಲಿ ಅವರಿಗಿದ್ದ ವೇಗವನ್ನು ಸೂಚಿಸುತ್ತದೆ.

ಹೊಸ ಜೀವನ ಚಿತ್ರ ರಿಲೀಸ್ ಆದ ಕೆಲ ತಿಂಗಳಲ್ಲಿ ಶಂಕರ್ ನಾಗ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಜುಲೈ 26ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ ಸೆ. 30ರಂದು ನಡೆದ ಅಪಘಾತದಲ್ಲಿ ಶಂಕರ್ ನಾಗ್ ಮೃತಪಟ್ಟಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top