fbpx
ಸಮಾಚಾರ

ಕಾಂಗ್ರೆಸ್‌, ಡಿಕೆ ಬ್ರದರ್ಸ್ ವಿರುದ್ಧ ಎಚ್ ಸಿ ಬಾಲಕೃಷ್ಣ ಗರಂ: ಕಮಲ ಹಿಡಿಯಲಿದ್ದಾರಾ ಕೈ ನಾಯಕ?

ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಬುಧವಾರ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮಾಗಡಿಯಲ್ಲಿ ಮಾತನಾಡಿದ ಅವರು, ನನ್ನನ್ನು ಗೆಲ್ಲಿಸುವುದು ನನ್ನ ಕ್ಷೇತ್ರದ ಜನ ಮಾತ್ರ. ಪಕ್ಷದ ಯಾವುದೇ ನಾಯಕರು ನನ್ನನ್ನು ಗೆಲ್ಲಿಸಲ್ಲ ಎಂದು ಡಿಕೆ ಸಹೋದರರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.

ಸುದ್ದಿಗ್ಗೋಷ್ಠಿಯಲ್ಲಿ ಮಾತನಾಡಿದ ಬಾಲಕೃಷ್ಣ “ನಾನು ಯಾವುದೇ ಪಕ್ಷವನ್ನು ನಂಬಿದವನಲ್ಲ. ನಮಗೆ ಪಕ್ಷಕ್ಕಿಂತ ಕಾರ್ಯಕರ್ತರು ಮುಖ್ಯ. ಅವರ ಆಶಯದಂತೆ ನಡೆಯುತ್ತೇನೆ. ನನ್ನ ಬೆಳೆಸುವುದು, ಉಳಿಸುವುದು ಕ್ಷೇತ್ರದ ಜನರು ಮಾತ್ರ. ನಾಯಕರ ಅವಶ್ಯಕತೆ ಬರುವುದು ನನಗೆ ಮಂತ್ರಿ ಸ್ಥಾನದ ಅವಕಾಶ ಬಂದಾಗ ಮಾತ್ರ. ಇಲ್ಲದಿದ್ದರೆ ಕ್ಷೇತ್ರದ ಜನರೇ ಎಲ್ಲ ಎಂದು ಹೇಳಿ ಬಂಡಾಯದ ಹಾದಿಯನ್ನು ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ತುಳಿದಿದ್ದಾರೆ.

“ಇತ್ತೀಚೆಗೆ ಪಕ್ಷದ ನಾಯಕರ ನಡೆ ಬೇಸರ ತರಿಸಿದೆ. ನಾನು ಮೊದಲು ಬಿಜೆಪಿಯಲ್ಲಿದ್ದೆ, ನಂತರ ಜೆಡಿಎಸ್ ನಲ್ಲಿದ್ದೆ. ಎರಡೂ ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ಆದರೆ ಕಾಂಗ್ರೆಸ್ ನಲ್ಲಿ ನನ್ನ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ ಎನಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು. ‘ಹಾಗಂತ ನಾನು ಕಾಂಗ್ರೆಸ್ ಬಿಡುತ್ತೇನೆ. ಬಿಜೆಪಿ ಸೇರುತ್ತೇನೆ ಎಂದು ಹೇಳಲಾರೆ. ಈಗ ಆ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ’ ಎಂದು ಕೂಡ ಬಾಲಕೃಷ್ಣ ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top