fbpx
ಸಮಾಚಾರ

ಮೈತ್ರಿ ಸರ್ಕಾರ ಪತನದ ಕುರಿತು ಜಾರಕಿಹೊಳಿ ಸ್ಫೋಟಕ ಹೇಳಿಕೆ: HDK ಸರಕಾರ ಪತನದ ರಹಸ್ಯ ಈಗ ಬಾಯಿಬಿಟ್ಟ ಸಾಹುಕಾರ!

ಮೈತ್ರಿ ಸರ್ಕಾರದ ಪತನ ಕುರಿತು ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಿನ ಗೂಗಡನಹಳ್ಳಿ ಕೆರೆಯ ವೀಕ್ಷಣೆ ವೇಳೆ ರಮೇಶ್ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದ್ದು ನಾನೇ ಎಂದು ಸಚಿವ ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ.

 

 

ಮೇಲ್ಗಾಲುವೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,”ಮೈತ್ರಿ ಸರಕಾರವನ್ನು ಬೀಳಿಸಬೇಕು ಎಂದು ನಿರ್ಧರಿಸಿದ್ದೆವು. ಸರ್ಕಾರ ಬೀಳಿಸಲು ಒಂದು ಉದ್ದೇಶ ಇತ್ತು. ಇದಕ್ಕೆ ಕಾಂಗ್ರೆಸ್​ನ ಮಾಜಿ ಶಾಸಕ ಕೆ.ಎನ್ ರಾಜಣ್ಣ ಸಹ ಕೈ ಜೋಡಿಸಿದ್ರು. ನಂತರ ಇಬ್ಬರೂ ಸೇರಿ ಸರ್ಕಾರ ಬೀಳಿಸಿದ್ವಿ. ರಾಜಣ್ಣರನ್ನು ಕೂಡ ಬಿಜೆಪಿಗೆ ಆಹ್ವಾನಿಸಿದ್ದೇವೆ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನೋಡಬೇಕಿದೆ,” ಎಂದರು.

ರಾಜ್ಯದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಾಂಗ್ರೆಸ್ ಇಲ್ಲ. ಪಕ್ಷದಲ್ಲಿ ಮುಖಂಡರಿಗೆ ಬೆಲೆ ಇಲ್ಲ . ಕಾಂಗ್ರೆಸ್ ಪಕ್ಷ ಬಿಟ್ಟು ಬನ್ನಿ ಎಂದರು ಕೆ.ಎನ್. ರಾಜಣ್ಣ ಬರುತ್ತಿಲ್ಲ. ಬಿಜೆಪಿಗೆ ಸೇರ್ಪಡೆಯಾಗುವ ಬಗ್ಗೆ ಮಾಜಿ ಶಾಸಕ ರಾಜಣ್ಣ ಅವರು ತೀರ್ಮಾನ ತೆಗೆದುಕೊಳ್ಳುತ್ತಿಲ್ಲ. ಹುಟ್ಟಿನಿಂದಲೂ ನಾನು ಕಾಂಗ್ರೆಸ್ಸಿಗ. ಪಕ್ಷ ಕಡೆಗಣಿಸಿದಾಗಲೇ ನಮ್ಮ ಶಕ್ತಿ ತೋರಿಸಿದ್ದೇವೆ. ಆಗಲೂ ಜೊತೆಗಿದ್ದೇವೆ, ಈಗಲೂ ಜೊತೆಗಿದ್ದೇವೆ ಬಿಜೆಪಿಗೆ ಬನ್ನಿ ಎಂದು ರಾಜಣ್ಣ ಅವರಿಗೆ ರಮೇಶ್ ಜಾರಕಿಹೊಳಿ ಆಹ್ವಾನ ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top