fbpx
ಸಮಾಚಾರ

ಮುತ್ತಪ್ಪ ರೈ ನಿಧನದ ಬೆನ್ನಲೇ ಚರ್ಚೆಗೆ ಕಾರಣವಾಯ್ತು ಜಯರಾಜ್ ಮಗನ ಈ FB ಪೋಸ್ಟ್

ಬಹಳ ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಡಾನ್ ಮುತ್ತಪ್ಪ ರೈ ನೆನ್ನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಮಧ್ಯೆ ಡಾನ್ ಜಯರಾಜ್‌ನ ಮಗ ಅಜಿತ್ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿರುವ ಪೋಸ್ಟ್ ಒಂದು ಭಾರಿ ಚರ್ಚೆಗೆ ಕಾರಣವಾಗಿದೆ.

“Sometimes the king has to remind the fools y he s King (‘ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ’) ಲವ್ ಯೂ ಅಪ್ಪ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ಜಯರಾಜ್‌ನ ಬೆಂಬಲಿಗರು ಕಾಮೆಂಟ್ ಬಾಕ್ಸ್‌ನಲ್ಲಿ ಮುತ್ತಪ್ಪ ರೈ ಸಾವನ್ನು ಸಂಭ್ರಮಿಸುತ್ತಿದ್ದಾರೆ.

 

 

ಇನ್ನು ಈ ವಿಚಾರವಾಗಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅಜಿತ್ ಜಯರಾಜ್, ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್‌ಬುಕ್ ಪೋಸ್ಟ್‌ಗೂ ಸಂಬಂಧವಿಲ್ಲ. ನಾನು ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ. ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಅಂದಹಾಗೆ ಮುತ್ತಪ್ಪ ರೈ ದೊಡ್ಡ ಡಾನ್ ಆಗಿ ಬೆಳೆಯಲು ಕಾರಣವಾದ ಮೊದಲ ಕೊಲೆ ಅಂದರೆ ಅದು ಡಾನ್ ಜಯರಾಜ್‌ ಮರ್ಡರ್. 1989ರ ವಿಧಾನ ಸಭಾ ಚುನಾವಣೆಯಲ್ಲಿ ಅಂದಿನ ಬೆಂಗಳೂರು ಡಾನ್ ಜಯರಾಜ್ ಜಯನಗರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ, ಈ ಸಂದರ್ಭದಲ್ಲಿ ಮುತ್ತಪ್ಪ ರೈ ಹಾಗೂ ಅವರ 10 ಜನ ಸಹಚರರು ಡಾನ್ ಜಯರಾಜ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಜಯರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top