fbpx
ಸಮಾಚಾರ

ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಬೆಳ್ಳಿ ಮಾಸ್ಕ್: ಬೆಲೆ ಎಷ್ಟು ಗೊತ್ತಾ?

ಕೋವಿಡ್‌-19 ತಡೆಗಟ್ಟುವ ಸಲುವಾಗಿ ಲಾಕ್‌ಡೌನ್‌ ಸಡಿಲಿಕೆ ಮಧ್ಯೆಯೂ ನಿರ್ಬಂಧಕಾಜ್ಞೆ ಮುಂದು ವರಿದಿದೆ. ಮುಂಜಾ ಗ್ರತ ಕ್ರಮ ವಾಗಿ ಸಾರ್ವ ಜನಿಕರು ಸಾರ್ವ ಜನಿಕ ಸ್ಥಳಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ತಯಾರಿಸಲಾಗಿದೆ.

ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಎಂಬುವವರು ಈ ಬೆಳ್ಳಿ ಮಾಸ್ಕ್ ತಯಾರಿಸಿದ್ದು ವಿಶೇಷವಾಗಿ ಕೋವಿಡ್ ಭೀತಿಯ ನಡುವೆಯೂ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆಯಂತೆ.

ಬೆಲೆ ರೂ 3000
25 ಗ್ರಾಂ ತೂಕದಲ್ಲಿ ತಯಾರಾಗಿರುವ ಈ ಮಾಸ್ಕ್ 2,500 ರೂ.ಗಳಿಂದ 3 ಸಾವಿರ ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮಾಸ್ಕ್‌ಗೆ ಈಗಿನಿಂದಲೇ ಡಿಮ್ಯಾಂಡ್ ಆರಂಭವಾಗಿದೆ. ಉಡುಗೊರೆ ನೀಡುವುದಕ್ಕೂ ಈ ಮಾಸ್ಕ್ ಕೊಳ್ಳಲು ಜನ ಬಯಸುತ್ತಾರೆ ಎಂದು ಸಂದೀಪ್ ಅವರು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top