fbpx
ಸಮಾಚಾರ

ಲಾಕ್‍ಡೌನ್-4: ಪ್ರತಿ ಭಾನುವಾರ ಮದ್ಯ ಮಾರಾಟವಿಲ್ಲ

4ನೇ ಹಂತದ ಲಾಕ್’ಡೌನ್’ಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಸಂಬಂದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್ ಬಿಟ್ಟು ಎಲ್ಲ ರೀತಿಯ ಅಂಗಡಿಗಳನ್ನ ತೆರೆಯಬಹುದಾಗಿದೆ. ಹೊರ ಗಡೆಯಿಂದ ಬರುವ ರೈಲುಗಳಿಗೆ ಅವಕಾಶವಿರುವುದಿಲ್ಲ, ರಾಜ್ಯದೊಳಗೆ ರೈಲುಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‌ಡೌನ್ ಇರುತ್ತದೆ. ಇದು ಲಾಕ್‌ಡೌನ್ 4ರ ಹೊಸ ನಿಮಯವಾಗಿದೆ. ಪಾರ್ಕ್‌ಗಳಲ್ಲಿ ಬೆಳಿಗ್ಗೆ 7 ರಿಂದ 9 ಸಂಜೆ 5 ರಿಂದ 7 ರ ವರೆಗೆ ಸಾರ್ವಜನಿಕರಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾನುವಾರ ಸಿಗಲ್ಲ ಎಣ್ಣೆ:
ಲಾಕ್‍ಡೌನ್ 4.0 ಮಾರ್ಗಸೂಚಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾನುವಾರ ಮದ್ಯ ಸಿಗಲ್ಲ. ಮೇ 31ರವರೆಗೆ ಪ್ರತಿ ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಇರಲಿದೆ. ಹಾಗಾಗಿ ಎಲ್ಲ ವ್ಯಾಪಾರ ಸೇರಿದಂತೆ ಮದ್ಯದಂಗಡಿಗಳು ಬಂದ್ ಆಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top