fbpx
ಸಮಾಚಾರ

ರಸ್ತೆಗಿಳಿದ BMTC ಬಸ್ ಗಳು: ಪಾಸ್ ಇದ್ದವರಿಗೆ ಮಾತ್ರ ಅವಕಾಶ

ಲಾಕ್‌ಡೌನ್ ನಿರ್ಬಂಧಗಳು ಮತ್ತಷ್ಟು ಸರಾಗವಾಗುವುದರೊಂದಿಗೆ ಬಿಎಂಟಿಸಿ ಮಂಗಳವಾರದಿಂದ ತನ್ನ ಕಾರ್ಯಾಚರಣೆಯನ್ನು ಪುನರ್ ಆರಂಭಿಸಿದೆ. ಆದಾಗ್ಯೂ, ಇದು ಲಾಕ್ ಡೌನ್ ಮುಂಚಿನ ರೀತಿಯಲ್ಲಿ ಇಲ್ಲ, ಇದು ಹಣರಹಿತ ಹಾಗೂ ಟಿಕೆಟ್ ರಹಿತವಾಗಿದೆ.

ಬಸ್​ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಬಿಎಂಟಿಸಿ ಬಸ್​ನಲ್ಲಿ ಸಂಚರಿಸಲು ಏಕಬೆಲೆಯ ಪಾಸ್​ಗಳನ್ನು ವಿತರಿಸಲಾಗುತ್ತದೆ. ಆ ಪಾಸ್​ಗಳನ್ನು ಹೊಂದಿವರಿಗೆ ಮಾತ್ರ ಬಸ್​ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ. ಬಸ್​ನಲ್ಲಿ ಟಿಕೆಟ್ ವಿತರಣೆ ಮಾಡುವುದರಿಂದ ಕೊರೋನಾ ಹರಡುವ ಅಪಾಯ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಮಾಡಲಾಗಿದೆ.

ದಿನದ ಪಾಸ್, ವಾರದ ಪಾಸ್ ಅಥವಾ ಮಾಸಿಕ ಪಾಸ್ ಇದ್ದವರು ಮಾತ್ರ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ. ತಿಂಗಳ ಪಾಸ್ಗಳನ್ನು ಕೌಂಟರ್ ನಲ್ಲಿ ಖರೀದಿ ಮಾಡಬೇಕಾಗಿದೆ. ಇದಲ್ಲದೆ ಹಿರಿಯ ನಾಗರೀಕರು, ಗರ್ಭಿಣಿ ಮಹಿಳೆಯರು ಮತ್ತು 10 ವರ್ಷದೊಳಗಿನ ಮಕ್ಕಳಿಗೂ ಬಸ್​​​​​​​​​​​​ನಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ

ಬೆಂಗಳೂರಿನಲ್ಲಿ ಪಾಸ್ಗಳ ದರ ಕೆಳಗಿನಂತಿದೆ:

ದಿನದ ಪಾಸ್ ₹70
ವಾರದ ಪಾಸ್ ₹300

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top