fbpx
ಸಮಾಚಾರ

ಸಚಿವ ಮಾಧುಸ್ವಾಮಿ ‘ರಾಸ್ಕಲ್’ ವಿವಾದ: ಸಂಸದ ಜಿಸಿ ಚಂದ್ರಶೇಖರ್ ಅಸಮಾಧಾನ

ಮನವಿ ಸಲ್ಲಿಸಲು ಬಂದಿರುವವರು ಮಹಿಳೆಯರು ಎಂಬ ಕನಿಷ್ಠ ಜ್ಞಾನವೂ ಇಲ್ಲದೆ, ‘ರಾಸ್ಕಲ್‌’ ಎಂಬ ಪದ ಬಳಸಿ ವಿವಾದಕ್ಕೀಡಾದ ಸಚಿವ ಮಾಧುಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವ ವ್ಯಕ್ತವಾಗುತ್ತಿದೆ. ಈ ಮದ್ಯೆ ಸಂಸದ ಜಿಸಿ ಚಂದ್ರಶೇಖರ್ ಕೂಡ ಮಾಧುಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಜಿಸಿ ಚಂದ್ರಶೇಖರ್ “ತನ್ನ ಕಷ್ಟ ಹೇಳಿಕೊಳ್ಳಲು ಬಂದ ರೈತ ಮಹಿಳೆಯ ಮೇಲೆ ಅಸಂಬದ್ಧ ಮಾತು ಪ್ರಯೋಗ ಮಾಡಿದ ಕಾನೂನು ಸಚಿವ ಮಾಧುಸ್ವಾಮಿ,. ಸಚಿವರು ರೈತರಿಗೆ,ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಮೊದಲು ಕಲಿಯಲಿ,ಜನಸೇವಕರು ನೀವು ಎಂಬುದು ನೆನಪಿರಲಿ,ಅವರು ತಿನ್ನುವ ಪ್ರತಿ ಅಗಳಿನಲ್ಲಿ ರೈತರ ಶ್ರಮವಿದೆ ಎಚ್ಚರವಹಿಸಿ ಮಾತಾಡಿ” ಎಂದು ಟ್ವೀಟ್ ಮಾಡಿದ್ದಾರೆ.

 

 

ಏನಿದು ಘಟನೆ:
ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇಂದು ಕೋಲಾರಕ್ಕೆ ಆಗಮಿಸಿದ್ದರು. ಇದೇ ವೇಳೆ ಅವರು ಅಗ್ರಹಾರ ಕೆರೆ ವೀಕ್ಷಣೆಗಾಗಿಯೂ ಸ್ಥಳಕ್ಕೆ ಆಗಮಿಸಿದ್ದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾದ್ಯಕ್ಷೆ ನಳಿನಿ ಗೌಡ ಹಾಗೂ ಮತ್ತೊರ್ವ ಮಹಿಳಾ ಹೋರಾಟಗಾರ್ತಿ ಸಚಿವರಿಗೆ ಮನವಿ ನೀಡಲು ಮುಂದಾದರು. ಅಲ್ಲದೆ, “ದಯವಿಟ್ಟು ಅಗ್ರಹಾರ ಕೆರೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ” ಎಂದು ಸಚಿವರ ಬಳಿ ವಿನಂತಿಸಿಕೊಂಡಿದ್ದರು. ಆದರೆ, ಈ ವೇಳೆ ಗರಂ ಆದ ಸಚಿವರು “ನೀನು ತೆರವು ಮಾಡ್ತೀಯೇನಮ್ಮ” ಎಂದು ಗದರಿಸಲು ಶುರು ಮಾಡಿದ್ದರು.

ಈ ವೇಳೆ ಕೆರೆಗಳ ಒತ್ತುವರಿ ತೆರವು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತೆಯರು ಮನವಿ ಮಾಡಲು ಮುಂದಾಗಿದ್ದರು. ಇದರಿಂದ ಸಿಡಿಮಿಡಿಗೊಂಡ ಮಾಧುಸ್ವಾಮಿ ಮಹಿಳೆಯನ್ನು ಗದರಿಸಿ “ಏಯ್ ಮುಚ್ಚು ಬಾಯಿ, ರಾಸ್ಕಲ್” ಎಂದು ನಿದಿಸಿದರು.

ಇದರಿಂದ ಕೋಪಗೊಂಡ ಮಹಿಳೆ “ಅದೇನ್ ಅಣ್ಣ ನೀವು ಹಿಂಗ ಮಾತಾಡ್ತಾ ಇದ್ದೀರಾ? ಕರೆಕ್ಟ್ ಆಗಿ ಮಾತಾಡಿ. ನೀವು ಹೀಗೆ ಮಾತ್ನಾಡೋದು ಸರಿನಾ” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕೂಡ ಮಧ್ಯೆ ಪ್ರವೇಶಿಸಿ ದರ್ಪ ಮೆರೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top