fbpx
ಸಮಾಚಾರ

ದಲಿತರು ಮಾಡಿದ ಅಡುಗೆ ತಿನ್ನುವುದಿಲ್ಲ ಎಂದ ಕ್ವಾರಂಟೈನ್‍ನಲ್ಲಿದ್ದ ಯುವಕ: ಪ್ರಕರಣ ದಾಖಲು

ನೈನಿತಾಲ್ ನಲ್ಲಿ ನಡೆದ ಇತ್ತೀಚಿನ ಘಟನೆಯೊಂದು ಸಮಾಜದಲ್ಲಿ ಜಾತಿವಾದ ಇನ್ನೂ ಗಟ್ಟಿಯಾಗಿ ಅಸ್ತಿತ್ವದಲ್ಲಿದೆ ಎಂದು ಬಹಿರಂಗಪಡಿಸಿದೆ. ದಲಿತ ಅಡುಗೆಯವ ತಯಾರಿಸಿದ ಆಹಾರವನ್ನು ತಿನ್ನಲು 23 ವರ್ಷದ ಯುವಕ ನಿರಾಕರಿಸಿರುವ ಘಟನೆ ಬೆಳಕಿಗೆ ಬಂದಿದೆ.

ದಿನೇಶ್ ಚಂದ್ರ ಮಿಲ್ಕನಿ ಎಂಬ ಯುವಕ ಸದ್ಯ ಕ್ವಾರಂಟೈನಲ್ಲಿದ್ದು, ದಲಿತ ಅಡುಗೆಯವರು ಮಾಡುವ ಮತ್ತು ಮುಟ್ಟಿದ ಅಡುಗೆ ಎಂಬ ಕಾರಣಕ್ಕೆ ಊಟವನ್ನು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಡುಗೆ ಮಾಡಿ ಕೊಡುವವರನ್ನು ಭವಾನಿ ದೇವಿ ಎಂದು ಗುರುತಿಸಲಾಗಿದೆ.

ಭವಾನಿ ದೇವಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು ಕ್ವಾರಂಟೈನ್ ನಲ್ಲಿರುವ ಎಲ್ಲ ವ್ಯಕ್ತಿಗಳಿಗೆ ಊಟ ತಯಾರಿಸುತ್ತಿದ್ದರು. ಹಾಗೆಯೇ ಮೇ 15ರಂದು ಕೂಡ ಎಲ್ಲರಿಗೂ ಅಡುಗೆ ಮಾಡಿಕೊಟ್ಟಿದ್ದರು. ಇದನ್ನು ಎಲ್ಲರೂ ಊಟ ಮಾಡಿದರೆ, ದಿನೇಶ್ ಮಾತ್ರ ತಿನ್ನಲು ನಿರಾಕರಿಸಿದ್ದಾನೆ. ಅಲ್ಲದೆ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿದ್ದಾನೆ.

ತನ್ನ ಊಟ ಮನೆಯಿಂದ ಬರುತ್ತದೆ ಎಂದು ದಿನೇಶ್ ಹೇಳಿದ್ದರು. ಆದರೆ ಮನೆಯಿಂದ ಊಟ ಬಂದಿರಲಿಲ್ಲ. ಆರಂಭದಲ್ಲಿ, ದೇವಿ ಜಾತಿ ತಾರತಮ್ನ್ಯದ ಬಗ್ಗೆ ತಿಳಿದಿರಲಿಲ್ಲ.. ಆದರೆ, ದಿನೇಶ್ ತನ್ನಿಂದ ಮುಟ್ಟಿದ ನೀರನ್ನು ಕುಡಿಯಲು ನಿರಾಕರಿಸಿದಾಗ ದೇವಿ ಅವರಿಗೆ ಸತ್ಯ ಅರಿವಾಯಿತು.

“ನಾವು ದಿನೇಶ್ ಬಳಿ ಊಟ ಮಾಡಲು ಹೇಳಿದಾಗ ಆತ ನನಗೆ ಮನೆಯಿಂದ ಊಟ ಬರುತ್ತದೆ ಎಂದು ಹೇಳಿ ತಪ್ಪಿಸಿಕೊಂಡನು. ಕೂಡಲೇ ನಾವು ದೇವಿ ಅವರ ಕೈಯಲ್ಲಿ ನೀರು ಕೊಟ್ಟು ಕುಡಿಯಲು ಹೇಳಿದೆವು. ಆಗ ಆತ ನೀರು ಕುಡಿಯಲು ಕೂಡ ನಿರಾಕರಿಸಿದ್ದಾನೆ. ಆಗ ಆತ ಜಾತಿ ತಾರತಮ್ಯ ಮಾಡುತ್ತಿದ್ದಾನೆ ಎಂಬುದು ತಿಳಿಯಿತು. ಈ ಕಾರಣಕ್ಕಾಗಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top