fbpx
ಸಮಾಚಾರ

ಮೇ 22: ಇಂದಿನ ಪಂಚಾಂಗ ಮತ್ತು ರಾಶಿ ಭವಿಷ್ಯ

ಸ್ಥಳ- ಬೆಂಗಳೂರು.
ಶುಕ್ರವಾರ, ಮೇ 22 2020
ಸೂರ್ಯೋದಯ: 6:52am
ಸೂರ್ಯಾಸ್ತ: 6:39pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು: ವೈಶಾಖ
ಪಕ್ಷ : ಕೃಷ್ಣಪಕ್ಷ
ತಿಥಿ :ಅಮಾವಾಸ್ಯೆ 23:07
ನಕ್ಷತ್ರ: ಕೃತಿಕೆ 27:09
ಯೋಗ: ಶೋಭನ 06:27
ಕರಣ: ಚತುಷ್ಪಾದ 10:24 ನಾಗ 23:07

ಅಭಿಜಿತ್ ಮುಹುರ್ತ: 11:51 am – 12:41 pm
ಅಮೃತಕಾಲ :12:32 am – 2:17 am

ರಾಹುಕಾಲ- 10:41 am – 12:16 pm
ಯಮಗಂಡ ಕಾಲ- 3:26 pm – 5:01 pm
ಗುಳಿಕ ಕಾಲ- 7:31 am – 9:06 am

 

 

ಮೇಷ (Mesha)


ಗುರುವಿನ ಪ್ರತಿಕೂಲತೆ ಮಕ್ಕಳಲ್ಲಿ ಅಸ್ಥಿರತೆ, ದೊಡ್ಡವರಲ್ಲಿ ಹಠ, ಛಲಗಳಿಗೆ ಕಾರಣವಾಗಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಿ. ಮುಖ್ಯವಾಗಿ ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

ವೃಷಭ (Vrushabh)


ಗುರುಬಲ ಉತ್ತಮವಿದ್ದರೂ ಚತುರ್ಥದ ರಾಹು ಆಗಾಗ ಸಮಸ್ಯೆಯನ್ನು ತಂದೊಡ್ಡಬಹುದು. ವ್ಯಾಪಾರ, ವ್ಯವಹಾರಗಳು ತುಸು ಚೇತರಿಕೆಯನ್ನು ಕಂಡಾವು. ದಾಯಾದಿಗಳ ಬಗ್ಗೆ ವಿಶ್ವಾಸವು ಬೇಡ.

ಮಿಥುನ (Mithuna)


ದಾಂಪತ್ಯದಲ್ಲಿ ಅತ್ಯಂತ ಸಹನೆ ಇರಲಿ. ಲಾಭಸ್ಥಾನದ ರಾಹು ನವದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸಿಯಾನು. ವ್ಯಾಪಾರ, ವ್ಯವಹಾರಗಳಲ್ಲಿ ಪಾಲುದಾರಿಕೆಯಲ್ಲಿ ಇತರರಿಂದ ವಂಚನೆಯಾಗದಂತೆ ನೋಡಿಕೊಳ್ಳಿರಿ.

ಕರ್ಕ (Karka)


ಶನಿ ಪ್ರಭಾವ ವ್ಯಾಪಾರ, ವ್ಯವಹಾರಗಳಲ್ಲಿ ಲಾಭ ತಂದು ಕೊಡಲಿದೆ. ಆಗಾಗ ಆಡೆತಡೆಗಳು ತೋರಿ ಬಂದರೂ ರಾಹು ಲಾಭದಾಯಕನಾಗಿದ್ದಾನೆ. ಮುನ್ನಡೆಗೆ ಕಾರಣನಾದಾನು. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶ ಪಡೆ‌ದಾರು.

ಸಿಂಹ (Simha)


ಗುರುಬಲ, ಕುಜಬಲ ಮುನ್ನಡೆಗೆ ಸಾಧಕವಾದೀತು. ಮುಖ್ಯವಾಗಿ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಸರಕಾರಿ ಕೆಲಸಗಳಲ್ಲಿ ಅಡೆತಡೆಗಳು ತೋರಿ ಬಂದಾವು. ದೃಢ ನಿರ್ಧಾರದಿಂದ ಮುಂದುವರಿಯಿರಿ.

ಕನ್ಯಾರಾಶಿ (Kanya)


ರಾಹು ಆಗಾಗ ಅಡೆತಡೆಗಳಿಗೆ ಕಾರಣನಾದಾನು. ವಿದ್ಯಾರ್ಥಿಗಳು ಅಭ್ಯಾಸಬಲವನ್ನು ಹೆಚ್ಚಿಸುವುದು ಉತ್ತಮ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶಗಳು ತೋರಿ ಬಂದಾವು. ಸದುಪಯೋಗಿಸಿಕೊಳ್ಳಿರಿ. ದಿನಾಂತ್ಯ ಶುಭ.

ತುಲಾ (Tula)


ಯಾವುದಕ್ಕೂ ಋಣಾತ್ಮಕ ಚಿಂತನೆಯನ್ನು ಮಾಡದೆ ನಿಮ್ಮ ದೃಢ ನಿರ್ಧಾರದಿಂದ ಕಾರ್ಯಕ್ಷೇತ್ರದಲ್ಲಿ ರಾಹು ಲಾಭದಾಯಕನಾದಾನು. ಶನಿಯ ಅನುಗ್ರಹ ಉತ್ತಮ ವಿರುವುದರಿಂದ ಒಂದಲ್ಲಾ ಒಂದು ರೀತಿಯಲ್ಲಿ ಒಳ್ಳೆಯ ಕರುಣಿಸಿಯಾನು.

ವೃಶ್ಚಿಕ (Vrushchika)


ವೈಯಕ್ತಿಕ ಆರೋಗ್ಯದ ಬಗ್ಗೆ ಹಾಗೂ ಸಾಂಸಾರಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಲಾಭ ಸ್ಥಾನದ ಗುರು ಏಕಾದಶದಲ್ಲಿದ್ದ ಕಾರಣ ಹೆಚ್ಚಿನ ಮನೋಕಾಮನೆಗಳು ನೆರವೇರುತ್ತವೆ.

ಧನು ರಾಶಿ (Dhanu)


ನಿಮ್ಮ ಪರಿಶ್ರಮಕ್ಕೆ ನಿಮ್ಮ ದೃಡ ನಿರ್ಧಾರಕ್ಕೆ ಲಾಭ ಸ್ಥಾನದ ರಾಹು ಮುನ್ನಡೆಯನ್ನು ತಂದು ಕೊಟ್ಟಾನು. ಆಗಾಗ ದೇಹಾರೋಗ್ಯದ ಬಗ್ಗೆ ಗಮನ ಹರಿಸಿರಿ. ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿದರೆ ಉತ್ತಮ.

ಮಕರ (Makara)


ಒಳ್ಳೆಯ ಗುರುಬಲವಿದ್ದರೂ ಅಷ್ಟಮದ ರಾಹು ಆಗಾಗ ಸಮಸ್ಯೆಯನ್ನು ತಂದೊಡ್ಡಬಹುದು. ವ್ಯಾಪಾರ, ವ್ಯವಹಾರ, ಔದ್ಯೋಗಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಶೀಲತೆಗೆ ಉತ್ತಮ ಯಶಸ್ಸು ಸಿಗಲಿದೆ.

ಕುಂಭರಾಶಿ (Kumbha)


ಅನಾವಶ್ಯಕವಾಗಿ ತಪ್ಪು ಅಭಿಪ್ರಾಯದಿಂದ ಬಳಲುವಂತಾದೀತು. ಸಾಂಸಾರಕವಾಗಿ ಅಭಿವೃದ್ಧಿ ತೋರಿ ಬಂದರೂ ಧರ್ಮಪತ್ನಿಯ ಸಲಹೆಗೆ ಸ್ಪಂದಿಸಿರಿ. ವೃತ್ತಿರಂಗದಲ್ಲಿ ಸದ್ಯದಲ್ಲೇ ಪರಿವರ್ತನೆ ಇದೆ.

ಮೀನರಾಶಿ (Meena)


ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ರಾಹುಬಲ ನಿಮ್ಮ ಎಷ್ಟೋ ಕೆಲಸಗಳು ಅನಿರೀಕ್ಷಿತ ರೀತಿಯಲ್ಲಿ ಆಗುವಂತೆ ಪರಿಣಾಮ ಬೀರಲಿವೆ. ದಿನಾಂತ್ಯ ಅತಿಥಿಗಳು ಬಂದಾರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top