fbpx
ಸಮಾಚಾರ

ಶಾಕಿಂಗ್ ವಿಡಿಯೋ: ಹಸಿವು ತಾಳಲಾರದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯ ಹಸಿ ಮಾಂಸವನ್ನು ತಿಂದ ವ್ಯಕ್ತಿ

ಹಸಿವು ಮನುಷ್ಯನನ್ನು ಅಸಹಾಯಕನನ್ನಾಗಿ ಮಾಡಿ ಬಿಡುತ್ತದೆ. ಹಸಿವನ್ನು ನೀಗಿಸಿಕೊಳ್ಳಲು ಯಾವುದೇ ಹಂತಕ್ಕಾದರೂ ಮಾನವ ಹೋಗಬಲ್ಲ. ಆ ಕ್ಷಣದ ಹಸಿವು ಮನುಷ್ಯನಿಂದ ಮನುಷ್ಯತ್ವವನ್ನೇ ಕಿತ್ತುಕೊಂಡ ಅನೇಕ ಪ್ರಕರಣಗಳನ್ನು ನಾವು ನೋಡಿರುತ್ತೇವೆ. ಆದರೆ ಈ ಘಟನೆ ಮಾತ್ರ ಇಡೀ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ.

 

 

ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶ ಸಂಕಷ್ಟಕ್ಕೆ ಸಿಲುಕಿ ಅನ್ನ ಆಹಾರವಿಲ್ಲದೆ ಜನರು ಕಂಗೆಡುವಂತಾಗಿತ್ತು. ಇನ್ನು ಜೈಪುರದಲ್ಲಿ ಹಸಿವು ತಾಳಲಾರದೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಅಪಘಾತವಾಗಿ ಸತ್ತು ಬಿದ್ದಿದ್ದ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಎಲ್ಲಿ ಘಟನೆ ನಡೆದಿದೆ ಎನ್ನುವುದು ಸ್ಪಷ್ಟವಾಗದಿದ್ದರೂ ಜೈಪುರ್-ದೆಹಲಿ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.

ತಿನ್ನಲು ಆಹಾರವಿಲ್ಲದೆ ಕಂಗಾಲಾಗಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಾಯಿಯ ಮಾಂಸವನ್ನು ತಿನ್ನುತ್ತಿದ್ದ. ಈ ವೇಳೆ ಇದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕರೊಬ್ಬರು ಇದನ್ನು ನೋಡಿ ಕಾರ್ ನಿಲ್ಲಿಸಿ, “ಏನನ್ನ ತಿನ್ನುತ್ತಿದ್ದೀರಾ ನೀವು? ಅದು ಸತ್ತು ಹೋಗಿದೆ. ಅದನ್ನು ಬಿಟ್ಟು ಮುಂದೆ ಕಾಣಿಸುತ್ತಲ್ಲಾ ಆ ಅಂಗಡಿ ಕಡೆಗೆ ಬಾ ನಿನಗೆ ಆಹಾರ ಕೊಡಿಸುತ್ತೇನೆ” ಎನ್ನುತ್ತಾರೆ.

ಸಮೀಪದ ಹೋಟೆಲ್‍ನಲ್ಲಿ ಆಹಾರ ತಂದು ಕೊಟ್ಟಾಗ ವ್ಯಕ್ತಿ ಖುಷಿಯಿಂದ ರಸ್ತೆಯಲ್ಲೇ ಕುಳಿತು ಸಿಕ್ಕ ಅನ್ನವನ್ನು ತಿಂದು ಹಸಿವು ನೀಗಿಸಿಕೊಂಡಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top