fbpx
ಸಮಾಚಾರ

ರಂಜಾನ್​ ಹಬ್ಬಕ್ಕೆ ಅಭಿಮಾನಿಗಳಿಗೆ ರಾಬರ್ಟ್​ನಿಂದ​ ಭರ್ಜರಿ ಉಡುಗೊರೆ; ಏನದು?

ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅಭಿನಯದ ‘ರಾಬರ್ಟ್‘​ ಚಿತ್ರತಂಡ ರಂಜಾನ್​ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಲು ಸಿದ್ಧವಾಗಿದೆ. ಈ ವಿಚಾರವನ್ನು ಸ್ವತಃ ರಾಬರ್ಟ್​ ನಿರ್ದೇಶಕ ತರುಣ್​ ಸುಧೀರ್​ ಅವರೇ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

 

 

ರಂಜಾನ್ ದಿನದಂದು ರಾಬರ್ಟ್ ಚಿತ್ರತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಲಿದೆ. ಹೌದು, ಮೇ 24ರಂದು ದೇಶದಾದ್ಯಂತ ರಂಜಾನ್​ ಹಬ್ಬದಲ್ಲಿರುವ ಜನತೆಗೆ ರಾಬರ್ಟ್​ ಚಿತ್ರತಂಡ ಪೋಸ್ಟರ್​​ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆ ಮೂಲಕ ರಂಜಾನ್​ಗೆ ಶುಭಾಶಯ ಕೋರಲಿದೆ. ಇನ್ನು ಕಳೆದ ವರ್ಷ ರಂಜಾನ್​ ಹಬ್ಬಕ್ಕೆ ರಾಬರ್ಟ್​​ ಚಿತ್ರತಂಡ ಥೀಮ್​ ಪೋಸ್ಟರ್​ ಬಿಡುಗಡೆ ಮಾಡಿತ್ತು.

ರಾಬರ್ಟ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ 53ನೇ ಚಿತ್ರ. ಇದಕ್ಕೆ ತರುಣ್‌ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ದರ್ಶನ್‌ಗೆ ನಾಯಕಿಯಾಗಿ ಭದ್ರಾವತಿ ಮೂಲದ ಕನ್ನಡತಿ ಆಶಾ ಭಟ್‌ ನಟಿಸಿದ್ದಾರೆ. ತೆಲುಗಿನ ಖ್ಯಾತ ಖಳನಟ ಜಗಪತಿಬಾಬು, ಚಂದನವನದ ವಿನೋದ್‌ ಪ್ರಭಾಕರ್‌ ಕೂಡ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಉಮಾಪತಿ ಶ್ರೀನಿವಾಸ್‌ ಬಂಡವಾಳ ಹೂಡಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top