fbpx
ಸಮಾಚಾರ

ಆಶಾ ಕಾರ್ಯಕರ್ತೆಯರಿಗೆ ತಲಾ 5 ಸಾವಿರ ಹಣ ಹಾಗೂ ದಿನಸಿ ಕಿಟ್ ವಿತರಿಸಿದ ಜಮೀರ್ ಅಹಮದ್

ಕೊರೋನಾ ವಿರುದ್ದದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಯೋಧರಂತೆ ಸೇವೆ ಸಲ್ಲಿಸುತ್ತಿದ್ದು, ಜನಸಾಮಾನ್ಯರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇವರ ಸೇವೆ ಮಹತ್ವದ್ದಾಗಿದೆ ಎಂದು ಮಾಜಿ ಸಚಿವ, ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

 

 

ಚಾಮರಾಜಪೇಟೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನೆನ್ನೆ 48 ಮಂದಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರನ್ನು ಜಮೀರ್ ಅಹ್ಮದ್ ಖಾನ್ ಸನ್ಮಾನಿಸಿದರು.. ಇದೆ ವೇಳೆ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹ ಧನ ಮತ್ತು ಅವಶ್ಯಕ ದಿನಸಿ ಕಿಟ್ ವಿತರಿಸಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಮೀರ್ ಅಹಮದ್ ಅವ್ರು ಕೆಲವು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಇನ್ನೂ ಸಂಬಳ ಬಂದಿಲ್ಲ. ಹೀಗಾಗಿ ವೈಯಕ್ತಿಕವಾಗಿ ಅವರಿಗೆ ಉಚಿತ ಆಹಾರದ ಕಿಟ್, ತಲಾ 5 ಸಾವಿರ ರೂ.ಗಳ ಪ್ರೋತ್ಸಾಹ ಧನ ವಿತರಿಸಿರುವುದಾಗಿ ಹೇಳಿದರು.

 

 

ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಜಮೀರ್ ಹಂಚಿಕೊಂಡಿದ್ದಾರೆ. “ಕಳೆದೊಂದು ತಿಂಗಳಿನಿಂದ ಸಂಬಳ ಬಾರದೆ ಸಂಕಷ್ಟದಲ್ಲಿದ್ದ ಆಶಾ ಕಾರ್ಯಕರ್ತೆಯರು ನನ್ನನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಇಂದು ನನ್ನ ವಿಧಾನಸಭಾ ಕ್ಷೇತ್ರದ 3 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಶಾಕಾರ್ಯಕರ್ತೆಯರಿಗೆ ತಲಾ 5,000 ರೂಪಾಯಿಯನ್ನು ವೈಯಕ್ತಿಕ ಸಹಾಯಧನವಾಗಿ ನೀಡಿದೆ.”

“ಜೊತೆಗೆ 25 ಕೆಜಿ ಅಕ್ಕಿ, ಗೋಧಿ, ಸಕ್ಕರೆ ಹಾಗೂ ತರಕಾರಿ ಸೇರಿದಂತೆ ಇತರ ಅಗತ್ಯ ದಿನಸಿ ವಸ್ತುಗಳನ್ನು ಉಚಿತವಾಗಿ ನೀಡಿದ್ದೇನೆ. ದೇಶದಲ್ಲಿ ಕೊರೊನಾ ಆರಂಭವಾದ ದಿನದಿಂದ ಜನರ ಜೀವ ರಕ್ಷಣೆಗಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಇವರ ಶ್ರಮಕ್ಕೆ ನೆರವಾಗುವ ಚಿಕ್ಕ ಪ್ರಯತ್ನ ನನ್ನದು. ” ಎಂದು ಜಮೀರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top