fbpx
ಸಮಾಚಾರ

ಪಂಚಾಯತ್ ರಾಜ್‌ ಇಲಾಖೆಯಲ್ಲಿ ಬೃಹತ್ ನೇಮಕಾತಿ: 7021 ಹುದ್ದೆಗೆ ಕರಡು ಅಧಿಸೂಚನೆ

ಕರ್ನಾಟಕದ ಪಂಚಾಯತ್ ರಾಜ್ ವಿಭಾಗದಲ್ಲಿ ಬೃಹತ್ ನೇಮಕಾತಿಗಾಗಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದ್ದು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ತಿಂಗಳಿನಲ್ಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.

ಒಟ್ಟು 7021 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅತೀ ಶೀಘ್ರದಲ್ಲಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿರುವವರು ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಆರಂಭಿಸಬಹುದು.

ಹುದ್ದೆಗಳ ವಿವರ ಇಂತಿದೆ: (ಒಟ್ಟು ಹುದ್ದೆಗಳು- 7021)
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-30, ಉಪ ಕಾರ್ಯದರ್ಶಿ (ಪಂಚಾಯತ್ ರಾಜ್)-69, ಮುಖ್ಯ ಲೆಕ್ಕಾಧಿಕಾರಿ-30, ಮುಖ್ಯ ಯೋಜನಾಧಿಕಾರಿ-30, ಸಹಾಯಕ ಕಾರ್ಯದರ್ಶಿ / ಕಾರ್ಯನಿರ್ವಾಹಕ ಅಧಿಕಾರಿ-265, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ)-226, ತಾಲ್ಲೂಕು ಯೋಜನಾಧಿಕಾರಿ-50, ಲೆಕ್ಕಾಧಿಕಾರಿ-53, ಯೋಜನಾ ನಿರ್ಣಾಯಕ ಮತ್ತು ಮೌಲ್ಯಮಾಪನ ಅಧಿಕಾರಿ-38, ಸಹಾಯಕ ಲೆಕ್ಕಾಧಿಕಾರಿ-50, ಪ್ರಾದೇಶಿಕ ಯೋಜನಕಾರರು /ಸಾಂಖ್ಯಿಕ ಅಧಿಕಾರಿ-37, ಸಹಾಯಕ ಸಾಂಖ್ಯಿಕ ಅಧಿಕಾರಿ-20, ಅಧೀಕ್ಷಕ-268, ಲೆಕ್ಕಾಧೀಕ್ಷಕ-294, ಪ್ರಥಮ ದರ್ಜೆ ಲೆಕ್ಕ ಸಹಾಯಕ-703, ಯೋಜನಾ ಸಹಾಯಕ-352, ಪ್ರಥಮ ದರ್ಜೆ ಸಹಾಯಕ-724, ಶೀಘ್ರಲಿಪಿಗಾರ-413, ದ್ವಿತೀಯ ದರ್ಜೆ ಸಹಾಯಕ-903, ಬೆರಳಚ್ಚುಗಾರರು-730, ವಾಹನ ಚಾಲಕ-523, ದಲಾಯತ್-1213.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top