fbpx
ಸಮಾಚಾರ

ಪಾಕ್ ವಿಮಾನ ಪತನದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ವಿಡಿಯೋ ವೈರಲ್

ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌‌ಲೈನ್ಸ್ (ಪಿಐಎ)ನ ಪ್ರಯಾಣಿಕರ ವಿಮಾನವು ಕರಾಚಿಯ ವಸತಿ ಪ್ರದೇಶದಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ. ಈ ವಿಮಾನ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು.

 

 

ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಜನನಿಬಿಡ ಪ್ರದೇಶದಲ್ಲಿ 99 ಪ್ರಯಾಣಿಕರಿರುವ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ (ಪಿಐಎ) ಪತನಗೊಂಡಿದ್ದು ಕನಿಷ್ಟ 82 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ವಿಮಾನ ಪತನಗೊಳ್ಳುವ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ‘ವೆದರ್‌ ಆಫ್‌ ಕರಾಚಿ’ ಎಂಬ ಹೆಸರಿನ ಟ್ವಿಟರ್‌ ಹ್ಯಾಂಡಲ್‌ ವಿಮಾನ ಪತನದ ವಿಡಿಯೊವನ್ನು ಹೊಂಚಿಕೊಂಡಿದ್ದು, ಬೆಚ್ಚಿಬೀಳಿಸುವಂತಿದೆ. ಸದ್ಯ ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top