fbpx
ಸಮಾಚಾರ

“ನನ್ನ DNAಯಲ್ಲೂ ಕನ್ನಡವಿದೆ” ಟೀಕಾಕಾರರಿಗೆ ಉತ್ತರ ಕೊಟ್ಟ ಪ್ರಶಾಂತ್ ನೀಲ್

‘ಕೆಜಿಎಫ್’ ಸಿನಿಮಾದಿಂದಾಗಿ ನಿರ್ದೇಶಕ ಪ್ರಶಾಂತ್ ನೀಲ್‌ ಅವರಿಗೆ ಈಗ ಸಖತ್ ಬೇಡಿಕೆ ಬಂದಿದೆ. ದೇಶವ್ಯಾಪಿ ಅವರಿಗೆ ಜನಪ್ರಿಯತೆ ಸೃಷ್ಟಿಯಾಗಿದೆ. ಇದೀಗ ಪ್ರಶಾಂತ್‌ಗೆ ಪರಭಾಷೆಯಿಂದಲೂ ಆಫರ್ಸ್‌ ಬರುತ್ತಿವೆ. “ನಾನು ಮುಂದೆ ಮಾಡುವ ಎಲ್ಲ ಸಿನಿಮಾಗಳು ಕನ್ನಡ ಚಿತ್ರಗಳೇ ಆಗಿರಲಿವೆ” ಎಂದು ಪ್ರಶಾಂತ್ ನೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಪ್ರಶಾಂತ್ ನೀಲ್ ಅವರು, ತೆಲುಗಿನ ಖ್ಯಾತ ನಟ ಜೂನಿಯರ್ ಎನ್‍ಟಿಆರ್ ಅವರ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದರು. ಇದಾದ ಬಳಿಕ ಕೆಜಿಎಫ್-2 ಸಿನಿಮಾದ ಬಳಿಕ ನೀಲ್ ಎನ್‍ಟಿಆರ್ ಜೊತೆಗೆ ತೆಲುಗು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಜೂ.ಎನ್‌ಟಿಆರ್‌ ಜೊತೆ ಪ್ರಶಾಂತ್‌ ಸಿನಿಮಾ ಮಾಡೋದು ಇದುವರೆಗೂ ಖಚಿತವಾಗಿರಲಿಲ್ಲ. ಆದರೆ, ಮೇ 20ರಂದು ಎನ್‌ಟಿಆರ್ ಜನ್ಮದಿನಕ್ಕೆ ಪ್ರಶಾಂತ್ ಶುಭಕೋರಿ, ಟ್ವೀಟ್ ಮಾಡಿದ್ದರು. ‘ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕೂತರೇ ಹೇಗಿರತ್ತೆ ಅನ್ನೋದು ಪಕ್ಕಾ ಗೊತ್ತಾಯ್ತು. ಇಂತಹ ಕ್ರೇಜಿ ಎನರ್ಜಿಯ ಸುತ್ತ ಇರಲು ಮುಂದಿನ ಸಲ ನನ್ನ ರೇಡಿಯೇಶನ್ ಸ್ಯೂಟ್‌ ಹಾಕಿಕೊಂಡು ಬರ್ತೀನಿ. ಜನ್ಮದಿನದ ಶುಭಾಶಯಗಳು ಬ್ರದರ್. ನಾವಿಬ್ಬರು ಬೇಗ ಭೇಟಿಯಾಗೋಣ’ ಎಂದಿದ್ದರು.

ಅಲ್ಲಿಗೆ, ಎನ್‌ಟಿಆರ್ ಜೊತೆಗೆ ಸಿನಿಮಾ ಮಾಡೋದು ಎಂದು ಸಿನಿಪ್ರಿಯರು ಊಹಿಸಿದರು. ಅಚ್ಚರಿ ಈ ಬಗ್ಗೆ ಕೆಲವೊಂದು ನೆಗೆಟಿವ್‌ ಪ್ರತಿಕ್ರಿಯೆಗಳು ಕೇಳಿಬಂದವು. ಇಲ್ಲಿ ಹುಟ್ಟಿ ಇಲ್ಲಿ ಬೆಳೆದು ನಂತರ ಬೇರೆ ಭಾಷೆಯ ಸಿನಿಮಾ ಮಾಡಲು ಹೋಗಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ‘ಇಷ್ಟು ದಿನ ಕನ್ನಡದಲ್ಲಿ ಸಿನಿಮಾ ಮಾಡಿ, ಈಗ ಪರಭಾಷೆಯ ಸ್ಟಾರ್‌ ನಟರಿಗೆ ಸಿನಿಮಾ ಮಾಡ್ತೀರಾ’ ಅಂತೆಲ್ಲ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಮಾಧ್ಯಮಗಳಿಗೆ ಪ್ರಶಾಂತ್ ನೀಲ್‌ ಪ್ರತಿಕ್ರಿಯೆ ನೀಡಿದ್ದಾರೆ.

ಆದ್ರೆ ಸ್ವತಃ ಪ್ರಶಾಂತ್ ನೀಲ್ ಈ ವಿಷಯವಾಗಿ ಸ್ಪಷ್ಟಪಡಿಸಿದ್ದು ‘ನನಗೆ ಕೆಲಸ ಮತ್ತು ಅನ್ನ ನೀಡಿರುವುದು ಕರ್ನಾಟಕ ಮತ್ತು ಕನ್ನಡಿಗರು. ಹಾಗಾಗಿ ನನ್ನ ಡಿಎನ್‍ಎಯಲ್ಲೂ ಕನ್ನಡವಿದೆ. ಸದ್ಯ ಕನ್ನಡವೇ ನನ್ನ ಧರ್ಮ. ಮುಂದಿನ ಯಾವ ಸಿನಿಮಾಗಳ ಬಗ್ಗೆಯೂ ನಾನು ಮಾತನಾಡೋದಿಲ್ಲ. ಆದ್ರೆ ನನ್ನ ಸಂಪೂರ್ಣ ಗಮನ ಈಗೇನಿದ್ರೂ ಕೆಜಿಎಫ್ ಚಾಪ್ಟರ್-2 ಮೇಲೆ. ಆದ್ರೆ ಒಂದೊಂಥೂ ನಿಜ. ನಾನು ಮಾಡುವ ಪ್ರತಿ ಸಿನಿಮಾ ಕನ್ನಡ ಭಾಷೆಯಲ್ಲೂ ಇರಲಿವೆ” ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top