fbpx
ಸಮಾಚಾರ

“ದಯವಿಟ್ಟು ಹೋಗಲು ಬಿಡಿ” ದೇವರಾಣೆ ಇಟ್ಟು ಬಿಸಿಸಿಐ ಬಳಿ ಕೈ ಮುಗಿದು ಬೇಡಿಕೊಂಡ ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಅವರು ಗುತ್ತಿಗೆ ರಹಿತ ಆಟಗಾರರಿಗೆ ವಿದೇಶಿ ಟ್ವೆಂಟಿ -20 ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಒತ್ತಾಯಿಸಿದ್ದಾರೆ. ಒಂದೆರಡು ಲೀಗ್‌ಗಳಲ್ಲಾದರು ಪಾಲ್ಗೊಳ್ಳುವ ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ.

“ನಮಗೂ ವಿದೇಶಿ ಲೀಗ್‍ಗಳಲ್ಲಿ ಪಾಲ್ಗೊಳ್ಳಲು ದಯವಿಟ್ಟು ಅವಕಾಶವನ್ನು ನೀಡಿ. ದೇವರ ಮೇಲೆ ಆಣೆ ಇಟ್ಟು ಹೇಳುತ್ತೇನೆ, ಬೇರೆಲ್ಲೂ ಹೋಗಿ ಆಡಲು ನಮಗೆ ಅವಕಾಶ ದೊರೆಯದ ಕಾರಣ ನಮಗೂ ನೋವಾಗುತ್ತದೆ. ವಿದೇಶಿ ಲೀಗ್‍ಗಳಲ್ಲಿ ಪಾಲ್ಗೊಳ್ಳಲು ಇರುವ ನಿರ್ಬಂಧವನ್ನು ತೆಗೆದುಹಾಕಬೇಕು. ಇದರಿಂದ ನಮಗೆ ಇನ್ನಷ್ಟು ಕಲಿಯಲು ಮತ್ತು ಬೆಳೆಯಲು ಸಕಾಯಕವಾಗುತ್ತದೆ” ಎಂದು ತಿಳಿಸಿದ್ದಾರೆ.

ಪ್ರಮುಖ ಮಂಡಳಿಗಳು ತನ್ನದೇ ಆದ ಟಿ20 ಟೂರ್ನಿಗಳನ್ನು ಆಯೋಜಿಸುತ್ತಿದೆ. ಉದಾಹರಣೆಗೆ ಆಸ್ಟ್ರೇಲಿಯಾದಲ್ಲಿ ಬಿಗ್ ಬಾಷ್, ವೆಸ್ಟ್‌ಇಂಡೀಸ್‌ನಲ್ಲಿ ಕೆರಿಬಿಯನ್ ಲೀಗ್ ಹೀಗೆ ಹಲವು ಲೀಗ್‌ಗಳು ನಡೆಯುತ್ತದೆ. ಆದರೆ ಬಿಸಿಸಿಐ ಅನುಮತಿ ನೀಡದ ಕಾರಣ ಈ ಎಲ್ಲ ಲೀಗ್‌ಗಳಲ್ಲಿ ಭಾಗವಹಿಸುವ ಅವಕಾಶದಿಂದ ಭಾರತೀಯ ಕ್ರಿಕೆಟಿಗರು ವಂಚಿತವಾಗಿದ್ದಾರೆ. ಹಾಗಾಗಿ ಕನಿಷ್ಠ ಪಕ್ಷ ಗುತ್ತಿಗೆ ರಹಿತ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ರಾಬಿನ್ ಉತ್ತಪ್ಪ ಬೇಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top