fbpx
ಸಮಾಚಾರ

ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಪ್ರಯೋಗಶೀಲ ನಿರ್ದೇಶಕಿ ಸುಮನಾ ಕಿತ್ತೂರ್

ಕನ್ನಡದ ಪ್ರಯೋಗಶೀಲ ನಿರ್ದೇಶಕಿಯರಲ್ಲಿ ಒಬ್ಬರಾಗಿರುವ ಸುಮನಾ ಕಿತ್ತೂರು (ಸುಮನ್ ಕಿತ್ತೂರ್) ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಆ ದಿನಗಳು’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್‍ವುಡ್‍ಗೆ ಪ್ರವೇಶಿಸಿದ ಸುಮನಾ ಬಳಿಕ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದರು.

ಶಿವಮೊಗ್ಗ ಮೂಲದವರಾದ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶ್ರೀನಿವಾಸ್ ಎಂಬುವವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಕುವೆಂಪು ಅವರ ಮಂತ್ರ ಮಾಂಗಲ್ಯದಿಂದ ವಿವಾಹ ಪದ್ಧತಿಯ ಮೂಲಕ ಕುಪ್ಪಳಿಯಲ್ಲಿ ವಿವಾಹವಾಗಬೇಕು ಎಂಬುದು ಸುಮನಾ ಅವರ ಬಯಕೆಯಾಗಿತ್ತು. ಆದರೆ ಲಾಕ್‍ಡೌನ್ ಕಾರಣದಿಂದ ಅದು ಸಾಧ್ಯವಾಗಿಲ್ಲ.

ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.

ಸುಮನಾ ಕಿತ್ತೂರ್​​ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ‘ಆ ದಿನಗಳು‘ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿದ್ದ ಸುಮನಾ ಕಿತ್ತೂರ್​ ನಂತರ ದುನಿಯಾ ವಿಜಯ್​ ನಟನೆಯ ‘ಸ್ಲಂ ಬಾಲ‘, ಯಶ್​ಜೊತೆ ‘ಕಳ್ಳರ ಸಂತೆ‘, ಆದಿತ್ಯ ನಟನೆಯ ‘ಎದೆಗಾರಿಕೆ‘, ‘ಕಿರಗೂರಿನ ಗಯ್ಯಾಳಿಗಳು‘ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top