ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ರನ್ನರ್ ಅಪ್ ಆಗಿ ಹೊರ ಬಂದಾತ ದಿವಾಕರ್. ಕಾಮನ್ ಮ್ಯಾನ್ ಕೋಟಾದಲ್ಲಿ ಬಿಗ್ಬಾಸ್ ಮನೆ ಸೇರಿದ್ದ ದಿವಾಕರ್ ಆ ನಂತರ ಪ್ರೇಕ್ಷಕರ ಮನ ಗೆದ್ದು ಈ ಶೋನಲ್ಲಿ ಕಡೇ ತನಕ ಉಳಿದುಕೊಂಡಿದ್ದರು.
ಸಾಮಾನ್ಯ ಸೇಲ್ಸ್ಮ್ಯಾನ್ ಆಗಿದ್ದ ದಿವಾಕರ್ ಬಿಗ್ಬಾಸ್ ಮನೆಗೆ ಬಂದು ಸಿಕ್ಕಾಪಟ್ಟೆ ಸೌಂಡು ಮಾಡಿದ್ರು. ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಅದರ ಜೀವನವೇ ಬದಲಾಯಿ ಹೋಯಿತು. ಹಲವಾರು ಸಿನಿಮಾಗಳಿಂದ ಆಫರ್ ಕೂಡ ಬಂತು. ಕೆಲವು ಸಿನಿಮಾದಲ್ಲಿ ನಟನೆ ಕೂಡ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟನೆ ಮಾಡಿದ್ದರೂ ಬಣ್ಣ ಹಚ್ಚಿದರೂ ತಮ್ಮ ಸೇಲ್ಸ್ಮ್ಯಾನ್ ವೃತ್ತಿ ಬಿಟ್ಟಿರಲಿಲ್ಲ. ಈಗ ಲಾಕ್ ಡೌನ್ ಇರುವುದರಿಂದ ಸಂಚಾರ ಕಷ್ಟವಾಗಲಿದೆ ಹಾಗಾಗಿ ನೋವು ನಿವಾರಕ ತೈಲ ಮಾರಾಟದ ಬದಲಿಗೆ ತರಕಾರಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ.
ಸದ್ಯ ಲಾಕ್ಡೌನ್ ಸಮಯದಲ್ಲಿ ಯಲಹಂಕ ಮಾರ್ಕೆಟ್ ಬಳಿ ಸೊಪ್ಪು ತರಕಾರಿ ಮಾರುತ್ತಿದ್ದಾರೆ. ಒಂದುವರೆ ತಿಂಗಳಿನಿಂದ ದಿವಾಕರ್ ಈ ವೃತ್ತಿಯನ್ನು ಮಾಡುತ್ತಿದ್ದಾರೆ. ಬೆಳಗ್ಗೆ 3 ಗಂಟೆಗೆ ಎದ್ದು ಯಲಹಂಕ ಮಾರ್ಕೆಟ್ನಿಂದ ಸೊಪ್ಪು, ತರಕಾರಿ ತಂದು ಬೀದಿಬದಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಕೊರೋನಾ ವಿರುದ್ಧ ಹೋರಾಡಲು ಜನರಿಗೆ ಅಗತ್ಯವಾಗಿ ಬೇಕಾಗಿರುವ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನೂ ಕೂಡ ಮಾರಾಟವನ್ನು ಮಾಡುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
