fbpx
ಸಮಾಚಾರ

ಕೊರೋನಾ ಕುರಿತಾದ ಭವಿಷ್ಯ: ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು ದಾಖಲು

ಸಮಾನ ಪ್ರಮಾಣದಲ್ಲಿ ಖ್ಯಾತಿ ಮತ್ತು ಕುಖ್ಯಾತಿಯನ್ನು ಪಡೆದಿರುವ ಬ್ರಹ್ಮಾಂಡ ಗುರೂಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ವಿರುದ್ಧ ಕೊಡಗಿನಲ್ಲಿ ದೂರು ದಾಖಲಾಗಿದೆ. ಕೊರೊನಾ ವೈರಸ್ ಪರಿಣಾಮದ ಕುರಿತಾಗಿ ನುಡಿದಿರುವ ಭವಿಷ್ಯ ಹಿನ್ನಲೆಯಲ್ಲಿ ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು ದಾಖಲಾಗಿದೆ.

ಮತ್ತೆ ಕೊಡಗಿನಲ್ಲಿ ಈ ಭಾರಿ ಭೂಕಂಪನ ಆಗಲಿದೆ. ಈ ಮೂಲಕ ಕೊಡಗು ಮತ್ತೆ ನೆಲಸಮವಾಗುತ್ತೆ ಎಂಬುದಾಗಿ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದರು. ಇದು ಕೊರೋನಾ ಅಲ್ಲ ಕೌಮಾರಿ. ಕೌಮಾರಿ ಶಾಂತಿಗಾಗಿ ಪೂಜೆ ಮಾಡಿಸಿ. ಎಲ್ಲಾ ದೇಗುಲಗಳಲ್ಲಿ ಪೂಜೆ ನಡೆಯಬೇಕು. ಭೂಕಂಪನದಿಂದ ಅಮೇರಿಕಾ, ಆಸ್ಟ್ರೇಲಿಯಾ ಸರ್ವನಾಶವಾಗಿ ಸಮುದ್ರಪಾಲು ಆಗಲಿದೆ. ಕೊಡಗು ಭೂಕಂಪನದಿಂದ ಮತ್ತೆ ನೆಲಸಮವಾಗಲಿದೆ ಎಂಬುದಾಗಿ ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದರು.

ಈ ಒಂದು ಭವಿಷ್ಯದ ವಿರುದ್ಧ ಕೊಡಗು ಬೆಳೆಗಾರ ಒಕ್ಕೂಟವು ದೂರು ಸಲ್ಲಿಸಿದೆ. ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರೇಂದ್ರಬಾಬು ಶರ್ಮಾ ನುಡಿದಿರುವ ಭವಿಷ್ಯ ಕೊಡಗಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಗುರೂಜಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top