fbpx
ಸಮಾಚಾರ

ದರ್ಶನ್​-ಯಶ್​ ಫ್ಯಾನ್ಸ್​ ನಡುವಿನ ಕಿತ್ತಾಟಕ್ಕೆ ಕಾರಣವಾಯ್ತ ಪವನ್​ ಒಡೆಯರ್​ ಮಾಡಿದ ಆ ಪೋಸ್ಟ್​​?

ಚಿತ್ರರಂಗದಲ್ಲಿ ಸ್ಟಾರ್‌ಗಳು ತಮ್ಮ ಪಾಡಿಗೆ ತಾವು ಅನ್ಯೋನ್ಯವಾಗಿದ್ದರೂ ಅಭಿಮಾನಿಗಳ ನಡುವೆ ಆಗಾಗ ತಿಕ್ಕಾಟ ಹೊತ್ತಿಕೊಳ್ಳುತ್ತಿರುತ್ತೆ. ಸದ್ಯ ಇಂಥಾದ್ದೇ ಒಂದು ಕೋಲ್ಡ್ ವಾರ್ ಮತ್ತೆ ಶುರುವಾಗಿದೆ. ಸ್ಟಾರ್ ನಟರ ಅಭಿಮಾನಿಗಳ ನಡುವೆ ಇಂಥಾದ್ದೊಂದು ವಾರ್ ನಡೆಯಲು ಕಾರಣವಾಗಿರೋದು ‘ಬಾಸ್’ ಎಂಬ ಬಿರುದು. ಕೆಲ ದಿನಗಳಿಂದ ತಣ್ಣಗಿದ್ದ ‘ಬಾಸ್’ ಎಂಬ ಬಿರುದಿಗಾಗಿ ಸ್ಟಾರ್‌ಗಳ ಅಭಿಮಾನಿಗಳ ನಡುವೆ ಶೀತಲ ಸಮರ ಈಗ ಮತ್ತೆ ಹುಟ್ಟಿಕೊಂಡಿದೆ.

 

 

ನಿರ್ದೇಶಕ ಪವನ್​ ಒಡೆಯರ್​ ಅವರು ಇತ್ತೀಚಿಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಯಶ್​ ಅವರೊಂದಿಗೆ ಇರುವ ಫೋಟೋವನ್ನು ಪೋಸ್ಟ್​ ಮಾಡಿದ್ದು, ಅದರಲ್ಲಿ ಯಶ್​ ಅವರನ್ನು ‘ಬಾಸ್​’ ಎಂದು ಕರೆದಿದ್ದಾರೆ. ಈ ಪೋಸ್ಟ್​ ನೋಡಿದ ಕೂಡಲೇ ದರ್ಶನ್​ ಅಭಿಮಾನಿಗಳು ನಿರ್ದೇಶಕ ಪವನ್​ ಒಡೆಯರ್​ ಅವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಿದ್ದು, ಅವಾಚ್ಯ ಶಬ್ದಗಳನ್ನು ಬಳಸುತ್ತಾ ಟ್ರೋಲ್​ ಮಾಡುತ್ತಿದ್ದಾರೆ. “ಸ್ಯಾಂಡಲ್ ವುಡ್ ನಲ್ಲಿ ಬಾಸ್ ಎಂದು ಕರೆಯುವುದು ಒಬ್ಬರನ್ನೆ, ಅದೂ ಡಿ ಬಾಸ್ ಮಾತ್ರ” ಎಂದು ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

 

 

ಇದರ ಬೆನ್ನಲ್ಲೇ ಪವನ್​ ಒಡೆಯರ್ ಅವರ ಪೋಸ್ಟ್ ಗೆ ಕಮೆಂಟ್​ ಮಾಡುತ್ತಿರುವ ಡಿಬಾಸ್ ಅಭಿಮಾನಿಗಳಿಗೆ ಯಶ್​ ಅಭಿಮಾನಿಗಳು ಸಹ ಉತ್ತರ ಕೊಡುತ್ತಿದ್ದಾರೆ. ಯಶ್ ಅಭಿಮಾನಿಗಳು ಸಹ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರು ಚಿತ್ರಗಳ ಕಲೆಕ್ಷನ್, ಇಬ್ಬರ ಖ್ಯಾತಿ ಸೇರಿದಂತೆ ನಾನಾವಿಚಾರಗಳನ್ನು ಮುಂದಿಟ್ಟುಕೊಂಡು ಕೆಟ್ಟ ಪದಗಳನ್ನು ಬಳಸಿ ತೀರಾ ಕೆಳಮಟ್ಟದ ಟ್ರೋಲ್ ಮಾಡುತ್ತಿದ್ದಾರೆ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ವಾರ್ ತಾರಕ್ಕೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೆಸರೆರಚಾಟ ಮುಂದುವರೆದಿದೆ.

ಇದು ಹಳೆಯ ವಿವಾದ:
ಕಳೆದ ವರ್ಷ ಟಗರು ಚಿತ್ರದ ಶತದಿನದ ಪೂರೈಸಿದ ಅಂಗವಾಗಿ ನಿರ್ದೇಶಕ ಸೂರಿ ಶಿವಣ್ಣನಿಗೆ ‘ಬಾಸ್ ಆಫ್ ಸ್ಯಾಂಡಲ್ ವುಡ್’ ಎಂಬ ಬಿರುದು ನೀಡಿತ್ತು. ಇದೇ ಅಭಿಮಾನಿಗಳ ನಡುವೆ ‘ಬಾಸ್’ ವಿವಾದ ಹೊತ್ತಿಕೊಳ್ಳಲು ಕಾರಣವಾಗಿತ್ತು. ಶಿವರಾಜ್ ಕುಮಾರ್, ದರ್ಶನ್ ಮತ್ತು ಯಶ್ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನೇ ‘ಬಾಸ್’ ಅನ್ನಬೇಕು ಎಂಬ ತರೇಹವಾರಿ ವಾದ ಮಂಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟದ ಜೊತೆಗೆ ದೊಡ್ಡ ಚರ್ಚೆಗಳು ನಡೆದಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top