fbpx
ಸಮಾಚಾರ

ಖ್ಯಾತ ನಿರ್ದೇಶಕ ಕರಣ್ ಜೋಹರ್ ಮನೆಯಲ್ಲಿ ಇಬ್ಬರಿಗೆ ಕೋರೋನಾ ಸೋಂಕು ದೃಢ

ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ಮನೆಯಲ್ಲಿನ ಇಬ್ಬರು ಕೆಲಸಗಾರರಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಕರಣ್ ಜೋಹರ್ ಸೋಮವಾರ ಈ ವಿಷಯ ತಿಳಿಸಿದ್ದು, ಸೋಂಕಿತ ಮನೆಕೆಲಸದವರು ಇದೀಗ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ತಿಳಿಸಿದಾಗ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡಕ್ಕೆ ಕ್ರಿಮಿನಾಶಕ ಸಿಂಪಡಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

 

 

“ನಮ್ಮ ಮನೆಯ ಕೆಲಸದವರಲ್ಲಿ ಕೋವಿಡ್-19 ರೋಗ ಲಕ್ಷಣಗಳು ಕಾಣಿಸಿಕೊಂಡ ಕೂಡಲೆ ನಮ್ಮ ಕಟ್ಟಡದಲ್ಲೇ ಅವರಿಗೆ ಕ್ವಾರಂಟೇನ್ ಮಾಡಲಾಯಿತು. ಕೂಡಲೆ ಬಾಂಬೆ ಕಾರ್ಪೊರೇಷನ್‌ಗೆ ತಿಳಿಸಿದೆವು. ಇಡೀ ಕಟ್ಟಡವನ್ನು ಫಾಗಿಂಗ್ ಮಾಡಲಾಗಿದೆ. ಉಳಿದ ಮನೆಯ ಸದಸ್ಯರು ಸುರಕ್ಷಿತವಾಗಿದ್ದು ಅವರಲ್ಲಿ ಯಾವುದೇ ರೋಗ ಲಕ್ಷಣಗಳೂ ಕಂಡುಬಂದಿಲ್ಲ. ನಾವೆಲ್ಲರೂ ಪರೀಕ್ಷೆಗೆ ಒಳಪಟ್ಟಿದ್ದು ನೆಗಟಿವ್ ಬಂದಿದೆ” ಎಂದು ತಿಳಿಸಿದ್ದಾರೆ ಕರಣ್.

ಮನೆಯಲ್ಲಿರುವ ನನ್ನ ಕುಟುಂಬ ಹಾಗೂ ಇನ್ನಿತರ ಕಾರ್ಮಿಕರಲ್ಲಿ ಯಾವ ಲಕ್ಷಣವೂ ಕಂಡು ಬಂದಿಲ್ಲ ಆದರೂ ನಾನು ಒಮ್ಮೆ ಟೆಸ್ಟ್‌ ಮಾಡಿಸಿದ್ದೇವೆ ನಮ್ಮೆಲ್ಲರ ವರದಿ ನೆಗೆಟಿವ್ ಬಂದಿದೆ. ಆರೋಗ್ಯದ ದೃಷ್ಟಿಯಲ್ಲಿ ನಾವೆಲ್ಲರೂ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರುತ್ತೇವೆ. ಅಧಿಕಾರಿಗಳು ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.

ನಮ್ಮ ಮನೆಯಲ್ಲಿ ಯಾರಿಗೆ ಕೊರೋನಾ ಲಕ್ಷಣಗಳು ಹಾಗೂ ಪಾಸಿಟಿವ್‌ ಎಂದು ತಿಳಿದು ಬಂದಲ್ಲಿ ಅವರ ಎಲ್ಲಾ ಚಿಕಿತ್ಸೆಗಳನ್ನೂ ನಾನು ನೋಡಿಕೊಳ್ಳುವೆ ಹಾಗೂ ಇನ್ನಿತ್ತರು ಆರೋಗ್ಯವಾಗಿರಲೂ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ರೋಗದಿಂದ ನಾವೆಲ್ಲರೂ ಬೇಗ ಮುಕ್ತರಾಗೋಣ. ಮನೆಯಲ್ಲಿ ಇರಿ ಸುರಕ್ಷಿತವಾಗಿರಿ ಎಂದು ಟ್ಟೀಟ್‌ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top