fbpx
ಸಮಾಚಾರ

ಕನ್ನಡಿಗರ ಒತ್ತಾಯಕ್ಕೆ ಬೆಚ್ಚಿಬಿದ್ದು ಯಲಹಂಕ ಮೇಲ್ಸೇತುವೆಗೆ ಸಾವರ್ಕರ್‌ ಹೆಸರು ಕೈಬಿಟ್ಟ ಸರ್ಕಾರ.

ಸಾಮಾನ್ಯ ಕನ್ನಡಿಗನ ಧ್ವನಿಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಣಿದಿದೆ. ಯಲಹಂಕ ಮೇಲ್ಸೇತುವೆಗೆ ವಿ.ಡಿ ಸಾವರ್ಕರ್‌ ಹೆಸರನ್ನು ಇಡಲು ರಾಜ್ಯ ಸರ್ಕಾರ ಮಾಡಿರುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿದೆ.

 

 

ನಾಳೆ ಸಾವರ್ಕರ್ ಅವರ ಜನ್ಮ ದಿನಾಚರಣೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ಉದ್ಘಾಟಿಸಲಿರುವ ಯಲಹಂಕದ ನೂತನ ಮೇತ್ಸೇತುವೆಗೆ ವಿ.ಡಿ. ಸಾವರ್ಕರ್ ಅವರ ಹೆಸರನ್ನು ನಾಮಕರಣ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಬಿಬಿಎಂಪಿ ಇಂದ ಕೂಡ ಅನುಮೋದನೆಯನ್ನೂ ಪಡೆದಿದ್ದರು.

ಆದರೆ ಆದರೆ, ಸರ್ಕಾರದ ಈ ನಿರ್ಧಾರವನ್ನು ಕನ್ನಡಿಗರು ತೀವ್ರವಾಗಿ ವಿರೋಧಿಸಿದ್ದರು. ಯಲಹಂಕ ಮೇಲ್ಸೇತುವೆಗೆ ವಿ.ಡಿ. ಸಾವರ್ಕರ್ ಹೆಸರನ್ನು ಇಡುವ ಬದಲು ಕರ್ನಾಟಕದ ಯಾವುದಾದರೂ ಗಣ್ಯ ವ್ಯಕ್ತಿಯ ಹೆಸರನ್ನು ನಾಮಕರಣ ಮಾಡಲು ಕನ್ನಡಿಗರು ಆಗ್ರಹಿಸಿದ್ದರು.

“ಯಲಹಂಕಕ್ಕೆ‌ ಐತಿಹ್ಯ ಇದೆ. ಯಲಹಂಕದ ನಾಡು ನಾಡ ಪ್ರಭುಗಳ ನಾಡು ಅಲ್ಲಿ ಬೆಂಗಳೂರು ಉಳಿಸಿದ ತಾಯಿ ಲಕ್ಷಿದೇವಿ ಅಥವಾ ರಣ ಭೈರೇಗೌಡ ಮುಂತಾದವರ ಹೆಸರಿಡಲಿ ಮುಂದಿನ ಜನಾಂಗ ಆ ಸ್ಥಳದ ಐತಿಹ್ಯ ತಿಳಿಯಲಿ” ಎಂದು ಸಾಮಾನ್ಯ ಕನ್ನಡಿಗ ಪೇಜ್ ಕೂಡ ಪೋಸ್ಟ್ ಮಾಡಿ ಸರ್ಕಾರವನ್ನು ಎಚ್ಚರಿಸಿತ್ತು

ಅಷ್ಟೇ ಅಲ್ಲದೆ ಯಲಹಂಕ ಮೇಲ್ಸೇತುವೆಗೆ ”ಯಲಹಂಕ ನಾಡಪ್ರಭು ಕೆಂಪೇಗೌಡರ” ಹೆಸರು ಅಥವಾ ‘ರಣ ಭೈರೇ ಗೌಡರ’ ಹೆಸರು ಅಥವಾ ಶ್ರೀ ಶಿವಕುಮಾರ ಸ್ವಾಮಿಗಳ ಹೆಸರು, ಶಂಕರ್ ನಾಗ್ , ಸಾಲುಮರದ ತಿಮ್ಮಕ್ಕನವರ ಹೆಸರು ಅಥವಾ ರಾಣಿ ಚೆನ್ನಮ್ಮ ,ಯಲಹಂಕ ಕ್ಷೇತ್ರವನ್ನು ಧೀರ್ಘ ಕಾಲ ಪ್ರತಿನಿದಿಸಿದ್ದ ರಾಜಕಾರಣಿ ಬಿ. ಬಸವಲಿಂಗಪ್ಪನವರ ಹೆಸರು ಸೂಕ್ತ ಎಂದು ಸಲಹೆ ನೀಡಾಲಾಗಿತ್ತು..

ಕನ್ನಡಿಗರ ತೀವ್ರ ವಿರೋಧದಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಸರ್ಕಾರ ಯಲಹಂಕ ಮೇಲ್ಸೇತುವೆಗೆ ವಿ.ಡಿ ಸಾವರ್ಕರ್‌ ಹೆಸರನ್ನು ಇಡದಿರಲು ನಿರ್ಧಾರ ಮಾಡಿದೆ. ಸದ್ಯ ಸಾವರ್ಕರ್ ಅವರ ಹೆಸರನ್ನು ಕೈಬಿಟ್ಟಿರುವ ವಿಚಾರ ಮಾತ್ರ ತಿಳಿದುಬಂದಿದ್ದು ಸಾವರ್ಕರ್ ಬದಲಿಗೆ ಯಾರ ಹೆಸರು ನಾಮಕರಣ ಮಾಡಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.. ಅಂದಹಾಗೆ ನಾಳೆ ಮೊದಲೇ ನಿಶ್ಚಯವಾದಂತೆ ಮೇಲ್ಸೇತುವೆಯ ಉದ್ಘಾಟನೆ ನಡೆಯಲಿದ್ದು ಸಾವರ್ಕರ್ ಹೆಸರು ನಾಮಕರಣವಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top