fbpx
ಸಮಾಚಾರ

“ಭೂಕಂಪದಿಂದ ಇಡೀ ಅಮೆರಿಕ ಮತ್ತು ಆಸ್ಟ್ರೇಲಿಯಾ ಸಮುದ್ರದ ಪಾಲಾಗುತ್ತವೆ” ಬ್ರಹ್ಮಾಂಡ ಗುರು ಭಯಾನಕ ಭವಿಷ್ಯ

ತಮ್ಮ ವಿಶಿಷ್ಟ ಮಾತಿನ ಧಾಟಿಯಿಂದಲೇ ಗುರುತಿಸಿಕೊಂಡಿರುವ, ಸಮಾನ ಪ್ರಮಾಣದಲ್ಲಿ ಖ್ಯಾತಿ ಮತ್ತು ಕುಖ್ಯಾತಿಯನ್ನು ಪಡೆದಿರುವ ಬ್ರಹ್ಮಾಂಡ ಗುರೂಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಸದ್ಯದಲ್ಲೇ ಅಮೇರಿಕಾದಿಂದ ಆಸ್ಟ್ರೇಲಿಯಾ ತನಕ ಭೂಕಂಪನ ಆಗಿ ಕೆಲ ಭೂಮಿ ಸಮುದ್ರದ ಪಾಲಾಗುತ್ತೆ ಎಂದು ಬ್ರಹ್ಮಾಂಡದ ಗುರೂಜಿ ನರೇಂದ್ರ ಶರ್ಮರ ಹೇಳಿರುವ ಭವಿಷ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದಶರಥರಾಮೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ನರೇಂದ್ರ ಶರ್ಮಾ, ಧಶರಥ ರಾಮೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಕಳೆದ ವರ್ಷ ಪ್ರವಾಹದಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದೆ, ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ ಎಂದು ಗುರೂಜಿಗಳು ಹೇಳಿದ್ದಾರೆ.

ಇನ್ನೂ ಮುಂದೆ ಹೋಗಿ ಅಂತಾರಾಷ್ಟ್ರೀಯ ಮಟ್ಟದ ಭವಿಷ್ಯ ನುಡಿದ ಗುರೂಜಿ ಭೂಕಂಪನದ ಭಯಾನಕ ಅನುಭವಕ್ಕೆ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಕೂಡಾ ಸಾಕ್ಷಿಯಾಗಲಿದೆ. ಭೂಕಂಪದಿಂದ ಇಡೀ ಅಮೆರಿಕಾ ಸರ್ವನಾಶವಾಗಲಿದೆ ಮತ್ತು ಆಸ್ಟ್ರೇಲಿಯಾ ಬಹುಪಾಲು ಸಮುದ್ರ ಪಾಲಾಗಲಿದೆ ಎನ್ನುವ ಭಯಾನಕ ಭವಿಷ್ಯವನ್ನ ಕೂಡ ಬ್ರಹ್ಮಾಂಡ ಗುರುಜೀ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top